alex Certify ಟಿ-20 ವಿಶ್ವಕಪ್ ಗೆ ದಿನಗಣನೆ: ತಂಡ ಸೇರಲಿರುವ ಮುಂಬೈ ಆಟಗಾರರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿ-20 ವಿಶ್ವಕಪ್ ಗೆ ದಿನಗಣನೆ: ತಂಡ ಸೇರಲಿರುವ ಮುಂಬೈ ಆಟಗಾರರು

ಐಪಿಎಲ್ ಅಂತಿಮ ಘಟ್ಟ ತಲುಪಿದೆ. ಟಿ-20 ವಿಶ್ವಕಪ್ ಗೆ ತಯಾರಿ ಶುರುವಾಗಿದೆ. 2021 ರ ಟಿ 20 ವಿಶ್ವಕಪ್‌ಗಾಗಿ, ರೋಹಿತ್ ಶರ್ಮಾ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಟಗಾರರು, ದುಬೈನಲ್ಲಿರುವ ಟೀಮ್ ಇಂಡಿಯಾ ಹೋಟೆಲ್‌ಗೆ ಪ್ರವೇಶಿಸಲಿದ್ದಾರೆ. ವಿಶ್ವಕಪ್ ಗೆ ಆಯ್ಕೆಯಾದ 15 ಸದಸ್ಯರ ತಂಡದಲ್ಲಿ ಮುಂಬೈ ತಂಡದಲ್ಲಿ 6 ಆಟಗಾರರಿದ್ದಾರೆ.

ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರಾಹುಲ್ ಚಹರ್ ಮತ್ತು ಜಸ್ಪ್ರೀತ್ ಇಂದು ಟೀಂ ಇಂಡಿಯಾ ಹೋಟೆಲ್ ಗೆ ತೆರಳಲಿದ್ದಾರೆ. ಫಿಟ್ನೆಸ್ ಕಾರಣಕ್ಕೆ ಎಲ್ಲರ ಕಣ್ಣುಗಳು ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಮೇಲಿದೆ.

ಭಾರತವು ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಟಿ 20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಅಕ್ಟೋಬರ್ 17 ರಿಂದ ಟಿ 20 ವಿಶ್ವಕಪ್  ಪಂದ್ಯಾವಳಿ ನಡೆಯಲಿದೆ. ಒಮನ್ ಮತ್ತು ಪಪುವಾ ನ್ಯೂಗಿನಿಯಾ ನಡುವಿನ ಬಿ ಗುಂಪಿನ 1 ನೇ ಸುತ್ತಿನ ಪಂದ್ಯ ನಡೆಯಲಿದೆ. ಅದೇ ದಿನ ಸಂಜೆ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ನಡುವೆ ಪಂದ್ಯ ನಡೆಯಲಿದೆ. ಅದೇ ಸಮಯದಲ್ಲಿ, ಸೂಪರ್ -12 ಸುತ್ತು ಅಕ್ಟೋಬರ್ 23 ರಿಂದ ಆರಂಭವಾಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...