ಸ್ಮಾರ್ಟ್ ವಿದ್ಯುತ್ ಮೀಟರ್‌ಗಳ ಅಳವಡಿಕೆಯನ್ನು ಎಲ್ಲಾ ಇಲಾಖೆಗಳ ಕಾರ್ಯಾಲಯಗಳಲ್ಲೂ ಅಳವಡಿಸುವುದನ್ನು ಖಾತ್ರಿ ಪಡಿಸಲು ಕೋರಿ ಎಲ್ಲಾ ಸಚಿವಾಲಯಗಳಿಗೂ ಇಂಧನ ಸಚಿವಾಲಯ ಸೂಚನೆ ಹೊರಡಿಸಿದೆ.
ಆದ್ಯತೆ ಮೇರೆಗೆ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಗೆ ಸೂಚಿಸಿರುವ ಇಂಧನ ಸಚಿವಾಲಯ, ಪ್ರೀ-ಪೇಯ್ಡ್ ಮೀಟರ್ ಆಧರಿತ ವಿದ್ಯುತ್ ಪೂರೈಕೆಗೆ ಮುಂಗಡ ಪಾವತಿ ಮಾಡಲು ತಿಳಿಸಿರುವ ಇಂಧನ ಸಚಿವಾಲಯ, ಇದೇ ವೇಳೆ ಲೆಕ್ಕಪತ್ರಗಳ ಸೂಕ್ತ ವ್ಯವಸ್ಥೆಯನ್ನೂ ಮಾಡಿಕೊಳ್ಳಲು ತಿಳಿಸಿದೆ.
ಅಬುಧಾಬಿಯಲ್ಲಿ ನಿರ್ಮಾಣವಾಗ್ತಿದೆ ಜಗತ್ತಿನ ಅತಿ ದೊಡ್ಡ ಅಕ್ವೇರಿಯಂ
ಸರ್ಕಾರದ ಎಲ್ಲಾ ಇಲಾಖೆಗಳ ಕಟ್ಟಡಗಳಲ್ಲೂ ಪ್ರೀ-ಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ, ವಿದ್ಯುತ್ ಮಿತಬಳಕೆಯೊಂದಿಗೆ ಎಲ್ಲಾ ಡಿಸ್ಕಾಂಗಳನ್ನೂ ಆರ್ಥಿಕ ಸ್ಥಿರತೆಗೆ ತರಲು ಸಾಧ್ಯವಾಗುವುದಲ್ಲದೇ, ಎಲ್ಲಾ ರಾಜ್ಯ ಸರ್ಕಾರಗಳ ಇಲಾಖೆಗಳಲ್ಲೂ ಈ ಕ್ರಮ ತೆಗೆದುಕೊಳ್ಳಲು ಉತ್ತೇಜನ ಕೊಡಬಹುದು ಎಂದು ಸಚಿವಾಲಯ ತನ್ನ ಸೂಚನೆಯಲ್ಲಿ ತಿಳಿಸಿದೆ.