alex Certify ʼಚಿನ್ನʼದ ಪದಕ ಗೆದ್ದ ಖುಷಿಯಲ್ಲಿ ಅಶ್ಲೀಲ ಪದ ಬಳಸಿದ ಮಹಿಳಾ ಕ್ರೀಡಾಪಟು….! ಕ್ಷಣ ಮಾತ್ರದಲ್ಲಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಿನ್ನʼದ ಪದಕ ಗೆದ್ದ ಖುಷಿಯಲ್ಲಿ ಅಶ್ಲೀಲ ಪದ ಬಳಸಿದ ಮಹಿಳಾ ಕ್ರೀಡಾಪಟು….! ಕ್ಷಣ ಮಾತ್ರದಲ್ಲಿ ವಿಡಿಯೋ ವೈರಲ್

ಜೀವನದಲ್ಲಿ ಅತ್ಯಂತ ಖುಷಿಯ ಕ್ಷಣವನ್ನ ಕಳೆಯುತ್ತಿದ್ದಾಗ ನಾವು ಏನು ಮಾಡುತ್ತಿದ್ದೇವೆ, ಏನು ಮಾತನಾಡುತ್ತಿದ್ದೇವೆ ಎಂಬ ಪರಿವೆ ಕೂಡ ಇರೋದಿಲ್ಲ. ಇಂತಹದ್ದೇ ಒಂದು ಪ್ರಸಂಗಕ್ಕೆ ಒಲಿಂಪಿಕ್​​ನಲ್ಲಿ ಭಾಗಿಯಾದ ಆಸ್ಟ್ರೇಲಿಯಾದ ಮಹಿಳಾ ಈಜುಪಟು ಕೇಯ್ಲೇ ಮೆಕೌನ್​ ಸಾಕ್ಷಿಯಾಗಿದ್ದಾರೆ. ಚಿನ್ನದ ಪದಕವನ್ನ ಸಂಪಾದಿಸಿದ ಕೆಯ್ಲೆ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

100 ಮೀಟರ್​ ಬ್ಯಾಕ್​ಸ್ಟ್ರೋಕ್​​ ಈಜು ಸ್ಪರ್ಧೆಯನ್ನ ಕೆಯ್ಲೆ 57.47 ಸೆಕೆಂಡ್ಸ್​ನಲ್ಲಿ ಪೂರ್ಣಗೊಳಿಸುವ ಮೂಲಕ ಒಲಿಂಪಿಕ್​​ನಲ್ಲಿ ಚಿನ್ನದ ಪದಕವನ್ನ ಗೆಲ್ಲೋದು ಮಾತ್ರವಲ್ಲದೇ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ. ಇಂತಹ ದೊಡ್ಡ ಸಾಧನೆ ಮಾಡಿದ ಬಳಿಕ ಕೆಯ್ಲೆ ಕೂಡ ತಮ್ಮ ಸಂಭ್ರಮವನ್ನ ಹೊರಹಾಕಿದ್ದಾರೆ.

ಕೆಯ್ಲೆ ಅವರ ಸಂದರ್ಶನವನ್ನ ಮಾಡಿದ ನಥಾನ್​ ಟೆಂಪ್ಲೆಟೊನ್​ ನಿಮ್ಮ ತಾಯಿ ಹಾಗೂ ಸಹೋದರಿಗೆ ಏನಾದರೂ ಸಂದೇಶ ನೀಡಲು ಬಯಸುವಿರೇ ಎಂದು ಪ್ರಶ್ನೆ ಮಾಡಿದ್ದಾರೆ.

ಸಂಭ್ರಮದಲ್ಲಿ ತೇಲುತ್ತಿದ್ದ ಕೆಯ್ಲೆ ಅಚಾನಕ್​ ಆಗಿ ಅಶ್ಲೀಲ ಶಬ್ಧವನ್ನ ಬಳಕೆ ಮಾಡಿದ್ದಾರೆ. ಕೂಡಲೇ ತಮ್ಮ ತಪ್ಪನ್ನ ಅರಿತ ಕೆಯ್ಲೆ ಆ ತಪ್ಪನ್ನ ಸರಿಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ನೆಟ್ಟಿಗರು ಇಂತಹದ್ದೊಂದು ಸಾಧನೆ ಮಾಡಿದ ಮೇಲೆ ಈ ರೀತಿಯ ಶಬ್ದ ಬಳಕೆ ಮಾಡೋದ್ರಲ್ಲಿ ತಪ್ಪೇನಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...