alex Certify ಇದೇ ಅಲ್ವಾ ಮಾನವೀಯತೆ….? ನಡುರಾತ್ರಿ ಅಪರಿಚಿತರಿಗೆ ಬೈಕ್‌ನಿಂದ ಪೆಟ್ರೋಲ್ ನೀಡಿದ ಸ್ವಿಗ್ಗಿ ಡೆಲಿವರಿ ಬಾಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ಅಲ್ವಾ ಮಾನವೀಯತೆ….? ನಡುರಾತ್ರಿ ಅಪರಿಚಿತರಿಗೆ ಬೈಕ್‌ನಿಂದ ಪೆಟ್ರೋಲ್ ನೀಡಿದ ಸ್ವಿಗ್ಗಿ ಡೆಲಿವರಿ ಬಾಯ್

ನಡುರಾತ್ರಿ ಬೈಕ್‌ನ ಪೆಟ್ರೋಲ್ ಖಾಲಿಯಾಗಿ ನಿರ್ಜನ ರಸ್ತೆಯಲ್ಲಿ ಅತಂತ್ರರಾಗಿದ್ದ ವ್ಯಕ್ತಿ ಮತ್ತು ಆತನ‌ ಸಹೋದರಿಗೆ ಸ್ವಿಗ್ವಿ ಡೆಲವರಿ ಬಾಯ್ ನೆರವಾದ ಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ.

ಅತಂತ್ರರಾಗಿ ರಸ್ತೆಯಲ್ಲಿದ್ದ ಅಕ್ಷಿತಾ ಮತ್ತು ಆಕೆಯ ಸಹೋದರ ತಲುಪಬೇಕಾದ ಸ್ಥಳ 64 ಕಿಮೀ ದೂರದಲ್ಲಿತ್ತು, ರಾತ್ರಿ ಕಳೆದು 12.15 ತಲುಪಿದಾಗ ಅವರು ಸಂಚರಿಸುತ್ತಿದ್ದ ವಾಹನದ ಇಂಧನ ಖಾಲಿಯಾಗಿತ್ತು. ರಸ್ತೆಯಲ್ಲಿ ಜನವೂ ಇರಲಿಲ್ಲ. ಸಮೀಪದ ಪೆಟ್ರೋಲ್ ಪಂಪ್ ವರೆಗೆ ತಲುಪುವುದು ಕಷ್ಟವಾಗಿತ್ತು.

Petrol Price Today: ಮತ್ತೆ ಪೆಟ್ರೋಲ್ ದರ ಏರಿಕೆ – 332 ಜಿಲ್ಲೆಗಳಲ್ಲಿ ದಾಖಲೆಯ ಮಟ್ಟಕ್ಕೇರಿದ ತೈಲ ಬೆಲೆ

ಈ ವೇಳೆ ಅದೇ ದಾರಿಯಲ್ಲಿ ಬಂದ ಸ್ವಿಗ್ಗಿ ಡೆಲಿವರಿ ಪ್ರತಿನಿಧಿ, ಇವರನ್ನು ಗಮನಿಸಿ ಅವರಿಬ್ಬರು ನೆರವು ಯಾಚಿಸಿದ್ದಾರೆ. ಆದರೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸಬೇಕಿದ್ದರಿಂದ ಬೈಕ್ ಎಳೆದುಕೊಂಡು ಹೋಗುವ ಪ್ರಸ್ತಾಪವನ್ನು ಸ್ವಿಗ್ವಿ ಪ್ರತಿನಿಧಿ ನಯವಾಗಿ ತಿರಸ್ಕರಿಸಿದ. ಹಾಗೆಯೇ ಆತ ನಿಗದಿತ ಸಮಯದಲ್ಲಿ ಗ್ರಾಹಕರಿಗೆ ತಲುಪಿಸುವ ಗುರಿಯನ್ನು ಮೀರಲು ಆತ ಸಿದ್ಧನಿರಲಿಲ್ಲ.

ಆದರೆ, ಅವರ ಬಳಿ ನೀರಿನ ಬಾಟಲಿ ಇದೆಯೇ ಎಂದು ವಿಚಾರಿಸಿದ್ದು, ಇಲ್ಲ ಎಂದು ಉತ್ತರ ಬಂದಾಗ ಆತ ತನ್ನಲ್ಲಿದ್ದ ಬಾಟಲಿ ನೀರು ಖಾಲಿ ಮಾಡಿ ಅಕ್ಷಿತಾ ಮತ್ತು ಅವಳ ಸಹೋದರ ಹತ್ತಿರದ ಬಂಕ್ ತಲುಪುವಷ್ಟು ಪೆಟ್ರೋಲನ್ನು ತನ್ನ ಬೈಕಿನಿಂದ ತೆಗೆದುಕೊಟ್ಟನು.

ಈ ಪ್ರಸಂಗವನ್ನು ಅಕ್ಷಿತಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವನ ನಡವಳಿಕೆಯಿಂದ ನಾನು ವಿಸ್ಮಯಗೊಂಡಿದ್ದೇನೆ, ನಮಗೆ ಆತ ಮಾರುವೇಷದಲ್ಲಿ ಬಂದ ದೇವರಾಗಿದ್ದನು ಎಂದು ಆಕೆ ವಿವರಿಸಿದ್ದಾರೆ.

ಅಂದ ಹಾಗೆ ಆ ಸ್ವಿಗ್ವಿ ಡೆಲಿವರಿ ಬಾಯ್ ಹೆಸರು ರೋಷನ್ ದಾಲ್ವಿ ಎಂದು ಅಕ್ಷಿತಾ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

Swiggy Delivery Agent Gives Petrol From Own Bike to Strangers Stranded at Night in Mumbai

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...