alex Certify ‘ಸೂತ್ರಧಾರಿ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೂತ್ರಧಾರಿ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ರ್ಯಾಪರ್ ಚಂದನ್ ಶೆಟ್ಟಿ ಅಭಿನಯದ ಕಿರಣ್ ಕುಮಾರ್ ನಿರ್ದೇಶನದ ‘ಸೂತ್ರಧಾರಿ’ ಚಿತ್ರದ  ವಿಡಿಯೋ ಹಾಡೊಂದನ್ನು ಇಂದು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು ಮೂರು ಗಂಟೆಗಳಲ್ಲಿ 9 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.

‘ಏನ್ ಮಾಡ್ಬೇಕು’ ಎಂಬ ಈ ಹಾಡಿಗೆ  ಚಂದನ್ ಶೆಟ್ಟಿ ಅವರೇ ಸಂಗೀತ ನಿರ್ದೇಶನ ಮಾಡುವ ಮೂಲಕ  ಧ್ವನಿಯಾಗಿದ್ದು ನಿರ್ದೇಶಕ ಕಿರಣ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.

ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಅಪೂರ್ವ, ಸಂಜನಾ ಆನಂದ್, ಪ್ರಶಾಂತ್, ತಬಲ ನಾಣಿ ಸೇರಿದಂತೆ ಮೊದಲಾದ ತಾರಾ ಬಳಗವಿದೆ. ಈಗಲ್ ಮೀಡಿಯ ಕ್ರಿಯೇಶನ್ ಬ್ಯಾನರ್ ನಡಿ ನವರಸನ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...