alex Certify ಬಾಯ್‌ ಫ್ರೆಂಡ್ ಗೆ ವಿಶ್‌ ಮಾಡಿದ ಹೃತಿಕ್‌ ರೋಷನ್‌ ಮಾಜಿ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯ್‌ ಫ್ರೆಂಡ್ ಗೆ ವಿಶ್‌ ಮಾಡಿದ ಹೃತಿಕ್‌ ರೋಷನ್‌ ಮಾಜಿ ಪತ್ನಿ

ಒಳಾಂಗಣ ವಿನ್ಯಾಸಕಿ ಸೂಸನ್ ಖಾನ್‌ ತಮ್ಮ ಬಾಯ್‌ಫ್ರೆಂಡ್ ಎಂದು ಪುಕಾರು ಮಾಡಲಾದ ಅರ್ಸಲನ್ ಗೋನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅರ್ಸಲನ್‌ಗೆ ಶುಭಾಶಯದ ಸಾಲುಗಳನ್ನು ಬರೆದಿರುವ ಸೂಸನ್ ಆತನನ್ನು ’ಅತ್ಯಂತ ಹೆಚ್ಚಿನ ಸಕಾರಾತ್ಮಕ ಶಕ್ತಿ’ ಎಂದು ಬಣ್ಣಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಗೋನಿಯೊಂದಿಗೆ ತಮ್ಮ ಚಿತ್ರವೊಂದನ್ನು ಹಂಚಿಕೊಂಡ ಸೂಸನ್, “ಹ್ಯಾಪಿ ಹ್ಯಾಪ್ಪೀ ಹ್ಯಾಪ್ಪಿಯೆಸ್ಟ್ ಬರ್ತ್‌ಡೇ….. ನೀವು ಅರ್ಹರಾಗಿರುವ ಪ್ರತಿಯೊಂದೂ ತುಂಬಿರುವ ಜಗತ್ತು ನಿಮ್ಮದಾಗಲಿ ಎಂದು ನಾನು ಹಾರೈಸುತ್ತೇನೆ. ನಾನು ಕಂಡಿರುವ ಅತ್ಯಂತ ಸುಂದರವಾದ ಎನರ್ಜಿ ನೀವು. ಹೀಗೇ ಮಿನುಗುತ್ತಿರಿ” ಎಂದು ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.

ಹೃತಿಕ್ ರೋಷನ್‌ ರಿಂದ ವಿಚ್ಛೇದನ ಪಡೆದ ಬಳಿಕ ಅರ್ಸಲನ್‌ ಗೋನಿ ಜೊತೆಗೆ ಆಗಾಗ ಕಾಣಿಸಿಕೊಳ್ಳುವ ಸೂಸನ್ ಕಳೆದ ತಿಂಗಳು ಅನುಷ್ಕಾ ರಂಜನ್‌ರ ಮದುವೆ ಸಂಭ್ರಮದಲ್ಲೂ ಸಹ ಜೊತೆಯಾಗಿ ಕಂಡಿದ್ದಾರೆ.

ಹೃತಿಕ್-ಸೂಸನ್ ಮದುವೆ ಮುರಿದು ಬೀಳುವ ಮುನ್ನ ಇಬ್ಬರಿಗೂ ಹೃದಾನ್ ಮತ್ತು ಹೃಹಾನ್ ಎಂಬ ಇಬ್ಬರು ಗಂಡು ಮಕ್ಕಳು ಜನಿಸಿದ್ದರು.

Sussane Khan wishes rumoured boyfriend Arslan Goni on birthday

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...