alex Certify ಕೊರೊನಾ ಮೂರನೇ ಅಲೆ ಮಧ್ಯೆಯೇ ಪ್ರವಾಸದ ಪ್ಲಾನ್ ಮಾಡಿದ್ದಾರೆ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮೂರನೇ ಅಲೆ ಮಧ್ಯೆಯೇ ಪ್ರವಾಸದ ಪ್ಲಾನ್ ಮಾಡಿದ್ದಾರೆ ಜನ

ಕೊರೊನಾ ಮೂರನೇ ಅಲೆ ಭಯದ ನಡುವೆ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಶೇಕಡಾ 28 ರಷ್ಟು ಭಾರತೀಯರು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಪ್ರವಾಸದ ಪ್ಲಾನ್ ಮಾಡ್ತಿದ್ದಾರೆಂದು  ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ರಕ್ಷಾಬಂಧನದಂತಹ ಪ್ರಮುಖ ಹಬ್ಬದ ಸಂದರ್ಭದಲ್ಲಿ ಜನರು ಪ್ರವಾಸ ಮಾಡುವ ಯೋಜನೆ ರೂಪಿಸಿದ್ದಾರೆ. ಪ್ರವಾಸಿ ತಾಣಗಳಲ್ಲಿ ಜನಸಂದಣಿ ಹೆಚ್ಚಾಗುವುದು ಕೊರೊನಾ ಅಲೆಯನ್ನು ಸುಲಭವಾಗಿ ಆಹ್ವಾನಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆನ್ಲೈನ್ ಪ್ಲಾರ್ಟ್ಫಾರ್ಮ್ ಈ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದೆ. 311 ಜಿಲ್ಲೆಗಳ 18 ಸಾವಿರಕ್ಕೂ ಹೆಚ್ಚು ಜನರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಇದ್ರಲ್ಲಿ ಶೇಕಡಾ 68ರಷ್ಟು ಪುರುಷರು ಹಾಗೂ ಶೇಕಡಾ 32ರಷ್ಟು ಮಹಿಳೆಯರು ಸೇರಿದ್ದಾರೆ. ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಶೇಕಡಾ 28 ರಷ್ಟು ಜನರು ಪ್ರವಾಸ ಪ್ಲಾನ್ ಮಾಡಿದ್ದಾರೆ. ಅದ್ರಲ್ಲಿ ಶೇಕಡಾ 5 ರಷ್ಟು ಜನರು ಈಗಾಗಲೇ ಟಿಕೆಟ್ ಹಾಗೂ ಹೊಟೇಲ್ ಬುಕ್ ಮಾಡಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಶೇಕಡಾ 63 ರಷ್ಟು ಜನರು ಈ 2 ತಿಂಗಳಲ್ಲಿ ಯಾವುದೇ ಪ್ರವಾಸದ ಪ್ಲಾನ್ ಹೊಂದಿಲ್ಲ ಎಂದಿದ್ದಾರೆ. ಶೇಕಡಾ 9ರಷ್ಟು ಜನರು ಈ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ ಎಂದಿದ್ದಾರೆ.

ಅನಿವಾರ್ಯವಲ್ಲದ ಪ್ರವಾಸಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಈ ಪ್ರವಾಸಗಳು ಕೊರೊನಾ ಮೂರನೇ ಅಲೆ ಹೆಚ್ಚಿಸುವ ಸಾಧ್ಯತೆ ಹೆಚ್ಚಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...