alex Certify ಠಾಣೆಯಲ್ಲೇ ಬಟ್ಟೆ ಬಿಚ್ಚಿ ಲೈಂಗಿಕ ಹೇಳಿಕೆ ನೀಡಿ ಮಹಿಳಾ ಪೊಲೀಸರಿಗೆ ಮುಜುಗರ ತಂದ ಕಿಡಿಗೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಠಾಣೆಯಲ್ಲೇ ಬಟ್ಟೆ ಬಿಚ್ಚಿ ಲೈಂಗಿಕ ಹೇಳಿಕೆ ನೀಡಿ ಮಹಿಳಾ ಪೊಲೀಸರಿಗೆ ಮುಜುಗರ ತಂದ ಕಿಡಿಗೇಡಿ

ಸೂರತ್: ಆಘಾತಕಾರಿ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ಬಟ್ಟೆಗಳನ್ನು ತೆಗೆದು ಅನುಚಿತವಾಗಿ ವರ್ತಿಸಿದ್ದಾನೆ. ಗುಜರಾತ್‌ನ ಸೂರತ್‌ನ ಸಲಾಬತಪುರ ಪೊಲೀಸ್ ಠಾಣೆಯ ಲಾಕ್ ಅಪ್‌ನಲ್ಲಿ ಇಂತಹ ಘಟನೆ ನಡೆದಿದೆ. ಇನ್ನೂ ಆಘಾತಕಾರಿ ಸಂಗತಿಯೆಂದರೆ ಆತ ಪೊಲೀಸ್ ಠಾಣೆಯಲ್ಲಿದ್ದ ಮಹಿಳಾ ಪೊಲೀಸರಿಗೆ ಲೈಂಗಿಕವಾದ ಹೇಳಿಕೆ ನೀಡಿ ಟೀಕಿಸಿದ್ದಾನೆ.

ಆರೋಪಿಯನ್ನು ಸೂರತ್ ಜಿಲ್ಲೆಯ ತಲೋದಾರ ಗ್ರಾಮದ ನಿವಾಸಿ ಸುರೇಶ್ ನಂದವಾಣಿ(55) ಎಂದು ಗುರುತಿಸಲಾಗಿದೆ. ಶುಕ್ರವಾರ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ನಂದವಾಣಿ ಹಲ್ಲೆ ನಡೆಸಿದ್ದರಿಂದ ಸಲಾಬತಪುರ ಪೊಲೀಸ್ ಠಾಣೆಯ ಲಾಕ್ ಅಪ್ ನಲ್ಲಿ ಇರಿಸಲಾಗಿತ್ತು.

ಲಾಕ್ ಅಪ್ ಒಳಗೆ ಕೂಗುತ್ತಲೇ ಇದ್ದ ಆತನಿಗೆ ಸುಮ್ಮನಿರುವಂತೆ ಠಾಣೆಯಲ್ಲಿದ್ದ ಮಹಿಳೆ ಪೊಲೀಸ್ ಸೂಚಿಸಿದ್ದಾರೆ. ನಂತರ ನಂದವಾಣಿ ಅವರ ಮಾತು ಕೇಳದೇ ಬಟ್ಟೆ ಬಿಚ್ಚಿದ್ದಲ್ಲದೇ, ಮಹಿಳಾ ಪೊಲೀಸರ ಕುರಿತಾಗಿ ಅಶ್ಲೀಲ ಹೇಳಿಕೆಗಳನ್ನು ನೀಡಲಾರಂಭಿಸಿದ್ದಾನೆ. ಪೊಲೀಸ್ ಸಿಬ್ಬಂದಿ ಆತನಿಗೆ ಬಟ್ಟೆಗಳನ್ನು ಹಾಕಿಕೊಳ್ಳುವಂತೆ ವಿನಂತಿಸಿದರೂ, ಅವರ ಮಾತನ್ನು ಕೇಳಲು ನಿರಾಕರಿಸಿದ್ದಾನೆ.

ಇನ್ಸ್‌ ಪೆಕ್ಟರ್ ಎಂ.ವಿ. ಕಿಕಾನಿ ಸೇರಿದಂತೆ ಪೊಲೀಸರು ಲಾಕ್ ಅಪ್ ಪ್ರವೇಶಿಸಿ ಬಟ್ಟೆಗಳನ್ನು ಧರಿಸುವಂತೆ ಒತ್ತಾಯಿಸಿದಾಗ ಆತ ಬಟ್ಟೆ ತೊಟ್ಟಿದ್ದಾನೆ. ಆತನ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳಡಿಯೂ ಪಪ್ರಕರಣ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...