alex Certify ಅ.17ರ ನಂತ್ರ ಈ ರಾಶಿಯವರಿಗೆ ಶುರುವಾಗ್ತಿದೆ ಸಂಕಷ್ಟ: 1 ತಿಂಗಳು ಕಾಡಲಿದೆ ತೊಂದರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅ.17ರ ನಂತ್ರ ಈ ರಾಶಿಯವರಿಗೆ ಶುರುವಾಗ್ತಿದೆ ಸಂಕಷ್ಟ: 1 ತಿಂಗಳು ಕಾಡಲಿದೆ ತೊಂದರೆ

ಸೂರ್ಯ ಗ್ರಹ ಪ್ರಭಾವಿ ಗ್ರಹಗಳಲ್ಲಿ ಒಂದು. ಸೂರ್ಯ ಪ್ರತಿ ತಿಂಗಳು ತನ್ನ ರಾಶಿ ಪರಿವರ್ತನೆ ಮಾಡ್ತಾನೆ. ಈ ಭಾರಿ ಅಕ್ಟೋಬರ್ 17ರಂದು ಸೂರ್ಯ ತುಲಾ ರಾಶಿಗೆ ಪ್ರವೇಶ ಮಾಡ್ತಿದ್ದಾನೆ. ನವೆಂಬರ್ 16ರವರೆಗೆ ಸೂರ್ಯ, ತುಲಾ ರಾಶಿಯಲ್ಲಿರಲಿದ್ದು, ಐದು ರಾಶಿಯ ಮೇಲೆ ಇದ್ರ ಪರಿಣಾಮ ಬೀರಲಿದೆ.

ವೃಷಭ : ವೃಷಭ ರಾಶಿಯವರಿಗೆ ಸೂರ್ಯ ತುಲಾ ರಾಶಿ ಪ್ರವೇಶ ಮಾಡ್ತಿರುವುದು ಅಶುಭ ಫಲ ನೀಡಲಿದೆ. ಅಕ್ಟೋಬರ್ 17ರಿಂದ ಒಂದು ತಿಂಗಳ ಕಾಲ ವೃಷಭ ರಾಶಿಯವರು ಸಮಸ್ಯೆ ಎದುರಿಸಲಿದ್ದಾರೆ. ವೃತ್ತಿ, ಆಸ್ತಿ ವಿಷ್ಯದಲ್ಲಿ ಎಚ್ಚರದಿಂದಿರಬೇಕು. ಜನರೊಂದಿಗೆ ವಾದ ಮಾಡುವುದನ್ನು ನಿಲ್ಲಿಸಿ.

ಮಿಥುನ : ಮಿಥುನ ರಾಶಿಯವರು ಕೂಡ ಎಚ್ಚರಿಕೆಯಿಂದಿರಬೇಕು. ಅನವಶ್ಯಕ ಮಾತುಗಳನ್ನು ತಪ್ಪಿಸಬೇಕು. ಕೆಲಸದ ಸ್ಥಳದಲ್ಲಿ ಶಾಂತಿ ಮತ್ತು ತಾಳ್ಮೆ ಕಾಪಾಡಿಕೊಳ್ಳಬೇಕು.

ಕರ್ಕ : ಸೂರ್ಯನು ತುಲಾ ರಾಶಿಯಲ್ಲಿದ್ದಾಗ ಕರ್ಕಾಟಕ ರಾಶಿಯವರು, ವೃತ್ತಿ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಶಾಂತಿಯಿಂದಿರುವುದ ಬಹಳ ಮುಖ್ಯ. ಯಾರೊಂದಿಗೂ ಜಗಳ ಆಡಬೇಡಿ.

ಕನ್ಯಾ : ಕನ್ಯಾ ರಾಶಿಯವರು ಕೂಡ ಎಚ್ಚರಿಕೆಯಿಂದಿರಬೇಕು. ಆರ್ಥಿಕ ನಷ್ಟ, ಗೌರವ ನಷ್ಟವಾಗುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಕುಂಭ : ಸೂರ್ಯನ ರಾಶಿ ಬದಲಾವಣೆ ಕುಂಭ ರಾಶಿಯ ಮೇಲೂ ಪರಿಣಾಮ ಬೀರಲಿದೆ. ಜನರ ಆತ್ಮವಿಶ್ವಾಸ ಕಡಿಮೆಯಾಗಲಿದೆ. ಆರೋಗ್ಯದಲ್ಲಿ ಏರುಪೇರಾಗಲಿದೆ. ಕುಟುಂಬದಲ್ಲಿ ಸಮಸ್ಯೆ ಎದುರಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...