alex Certify ಶಾಕಿಂಗ್ ನ್ಯೂಸ್: ಬಿಸಿಲ ಝಳ ಹೆಚ್ಚಳ, ತಟ್ಟಿದ ತಾಪಮಾನಕ್ಕೆ ಜನ ತತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ಬಿಸಿಲ ಝಳ ಹೆಚ್ಚಳ, ತಟ್ಟಿದ ತಾಪಮಾನಕ್ಕೆ ಜನ ತತ್ತರ

ಬೆಂಗಳೂರು: ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗತೊಡಗಿದೆ. ಇದೇ ಅವಧಿಯಲ್ಲಿ ಬಿಸಿಲ ಝಳ ಹೆಚ್ಚಾಗಿ ತಾಪಮಾನ ತಟ್ಟುತ್ತಿದೆ.

ಕಲ್ಬುರ್ಗಿಯಲ್ಲಿ ಗರಿಷ್ಠ ತಾಪಮಾನ 38.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮಾರ್ಚ್ ಕೊನೆಯ ನಂತರ ಹಂತಹಂತವಾಗಿ ಬೇಸಿಗೆ ಬಿಸಿಲ ಝಳ ತೀವ್ರತೆ ಪಡೆದುಕೊಳ್ಳುತ್ತಿತ್ತು. ಈ ಬಾರಿ ಮಾರ್ಚ್ ಮೊದಲ ದಿನದಂದೇ ಅತ್ಯಧಿಕ ತಾಪಮಾನ ವರದಿಯಾಗಿದೆ. ಕಲ್ಬುರ್ಗಿಯಲ್ಲಿ ಕನಿಷ್ಠ 22 ಡಿಗ್ರಿ, ಗರಿಷ್ಠ 37 ಡಿಗ್ರಿ ತಾಪಮಾನ ಇರುತ್ತದೆ. ಸೋಮವಾರ 38.6 ತಾಪಮಾನ ದಾಖಲಾಗಿದೆ. ವಾಡಿಕೆಗಿಂತ ಅಧಿಕ ತಾಪಮಾನ ದಾಖಲಾಗಿದ್ದು ಈ ಬಾರಿ ಬಿಸಿಲ ಪ್ರಕಾರ ಜಾಸ್ತಿಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಉತ್ತರ ಒಳನಾಡು ಭಾಗದ ಜಿಲ್ಲೆಗಳಲ್ಲಿ ಬಿಸಿಲಿನ ಹವೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...