alex Certify ಬೆಟ್ಟದಲ್ಲಿ ಮೈಮರೆತ ಜೋಡಿ, ಸೆಕ್ಸ್ ವಿಡಿಯೋ ಮಾಡಿ ಬಾಲಕರಿಂದ ಬ್ಲಾಕ್ ಮೇಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಟ್ಟದಲ್ಲಿ ಮೈಮರೆತ ಜೋಡಿ, ಸೆಕ್ಸ್ ವಿಡಿಯೋ ಮಾಡಿ ಬಾಲಕರಿಂದ ಬ್ಲಾಕ್ ಮೇಲ್

ಬೆಂಗಳೂರು: ಯುವತಿಯೊಂದಿಗಿನ ಖಾಸಗಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಬ್ಲಾಕ್ಮೇಲ್ ಮಾಡಿದ್ದರಿಂದ ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಾಸನ ಜಿಲ್ಲೆ ಅರಸೀಕೆರೆಯ 32 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡವ ಎಂದು ಹೇಳಲಾಗಿದೆ. ಚೆಸ್ಕಾಂನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಅರಸೀಕೆರೆ ಸಮೀಪದ ಬೆಟ್ಟವೊಂದಕ್ಕೆ ಆಕೆಯ ಜೊತೆ ಹೋಗಿದ್ದ. ಯುವತಿಯೊಂದಿಗೆ ಖಾಸಗಿ ಕ್ಷಣ ಕಳೆಯುವಾಗ ಅದೇ ಊರಿನ ನಾಲ್ವರು ಬಾಲಕರು ಮೊಬೈಲ್ ನಲ್ಲಿ ದೃಶ್ಯ ಚಿತ್ರೀಕರಿಸಿಕೊಂಡಿದ್ದಾರೆ.

ಬಳಿಕ ಯುವಕನನ್ನು ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ ಬಾಲಕರು ಯುವತಿಯ ಮೊಬೈಲ್ ನಂಬರ್ ಕೊಡುವಂತೆ ಬೆದರಿಸಿದ್ದಾರೆ. ಸೆಕ್ಸ್ ವೀಡಿಯೋ ತೋರಿಸಿ ಬೆದರಿಸಿದ್ದಲ್ಲದೇ, ಯುವತಿ ಮೊಬೈಲ್ ನಂಬರ್ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದು, ಇದರಿಂದ ಆತಂಕಗೊಂಡ ಯುವಕ ಬೆಂಗಳೂರಿಗೆ ತೆರಳಿ ಉಪ್ಪಾರಪೇಟೆಯ ಲಾಡ್ಜ್ ನಲ್ಲಿ ತಂಗಿದ್ದು, ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...