alex Certify ಮಾಡೆಲ್ ಡೆತ್ ನೋಟ್ ನಲ್ಲಿ ಪ್ರಿಯಕರನ ಹೆಸರು: ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಡೆಲ್ ಡೆತ್ ನೋಟ್ ನಲ್ಲಿ ಪ್ರಿಯಕರನ ಹೆಸರು: ಅರೆಸ್ಟ್

ಬೆಂಗಳೂರು: ಮಾಡೆಲ್ ವಿದ್ಯಾಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಕರ ಅಕ್ಷಯ್ ಕುಮಾರ್(26) ನನ್ನು ಸೋಲದೇವನಹಳ್ಳಿ ಠಾಣೆ ಪೋಲೀಸರು ಬಂಧಿಸಿದ್ದಾರೆ.

25 ವರ್ಷದ ವಿದ್ಯಾಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ತಾಯಿ ತ್ರಿವೇಣಿ ನೀಡಿದ ದೂರಿನ ಅನ್ವಯ ಅಕ್ಷಯ್ ಕುಮಾರ್ ನನ್ನು ಬಂಧಿಸಲಾಗಿದೆ. ಜುಲೈ 23ರಂದು ವಿದ್ಯಾಶ್ರೀ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೈರಿಯಲ್ಲಿ ಅಕ್ಷಯ್ ಕುಮಾರ್ ಹೆಸರು ಬರೆದಿಟ್ಟಿದ್ದು, ಪ್ರಾಥಮಿಕ ತನಿಖೆ ವೇಳೆ ಇದು ಕಂಡು ಬಂದ ಹಿನ್ನೆಲೆಯಲ್ಲಿ ಅಕ್ಷಯ್ ಕುಮಾರ್ ನನ್ನು ಬಂಧಿಸಲಾಗಿದೆ.

ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ವಿದ್ಯಾಶ್ರೀ ಬಸವೇಶ್ವರನಗರದ ಜಿಮ್ ಟ್ರೈನರ್ ಆಗಿದ್ದ ಅಕ್ಷಯ್, ವಿದ್ಯಾಶ್ರೀ ಪ್ರೀತಿಸಿದ್ದು, ಅನ್ಯೋನ್ಯವಾಗಿದ್ದರು. ಹಂತ ಹಂತವಾಗಿ ಅಕ್ಷಯ್ ಗೆ 1.60 ಲಕ್ಷ ರೂ.ಗಳನ್ನು ವಿದ್ಯಾಶ್ರೀ ನೀಡಿದ್ದು, ಹಣ ವಾಪಸ್ ಕೇಳಿದ್ದಕ್ಕೆ ಮನ ಬಂದಂತೆ ಬೈದಾಡಿ ಆಕೆಯಿಂದ ದೂರವಾಗಿದ್ದ. ಇದರಿಂದ ನೊಂದ ವಿದ್ಯಾಶ್ರೀ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿಗೆ ಅಕ್ಷಯ್ ಕಾರಣ ಎಂದು ತಾಯಿ ದೂರು ನೀಡಿದ್ದು ಅಕ್ಷಯ್ ನನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...