alex Certify ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿನ್ನು ತ್ವರಿತ ಸೇವೆ, ಲಂಚ, ದಲ್ಲಾಳಿಗಳ ಹಾವಳಿಗೆ ಬ್ರೇಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿನ್ನು ತ್ವರಿತ ಸೇವೆ, ಲಂಚ, ದಲ್ಲಾಳಿಗಳ ಹಾವಳಿಗೆ ಬ್ರೇಕ್

ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ತ್ವರಿತಗತಿಯಲ್ಲಿ ಸೇವೆ ನೀಡಲು ಕಾವೇರಿ 2.0 ತಂತ್ರಾಂಶ ಅಳವಡಿಸಲು ಕಂದಾಯ ಇಲಾಖೆ ಮುಂದಾಗಿದೆ.

ಪಾಸ್ಪೋರ್ಟ್ ಮಾದರಿಯ ಸೇವೆ ಒದಗಿಸಲು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹೊಸ ಕಾವೇರಿ 2.0 ತಂತ್ರಾಂಶ ಬಳಸಲಾಗುವುದು. ರಾಜ್ಯದಲ್ಲಿ 260 ಸಬ್ ರಿಜಿಸ್ಟ್ರಾರ್ ಕಚೇರಿಗಳಿದ್ದು, ದಿನಕ್ಕೆ ಸುಮಾರು 10,000 ದಾಖಲೆ ಪತ್ರಗಳನ್ನು ನೋಂದಣಿ, ದೃಢೀಕರಣ ಪತ್ರ ಸೇವೆ ಒದಗಿಸಲಾಗುತ್ತಿದೆ.

ತ್ವರಿತಗತಿಯ ಸೇವೆಗಾಗಿ ಕಾವೇರಿ 2.0 ತಂತ್ರಾಂಶ ಅಳವಡಿಸಲಾಗುವುದು. ಆನ್ಲೈನ್ ನಲ್ಲಿ ಸೇವೆಯ ಕಾರಣ ಅಧಿಕಾರಿಗಳಿಗೆ ಲಂಚ ಕೊಡುವಂತಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಬಹುದು. ದಿನವಿಡೀ ಕಚೇರಿ ಎದುರು ಕಾಯುವ ಬದಲು ನಿಗದಿತ ಸಮಯಕ್ಕೆ ಹೋಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಏಜೆಂಟರ ಸಹಾಯ ಅಗತ್ಯ ಇರುವುದಿಲ್ಲ. ಕಚೇರಿಗಳಿಗೆ ಅಲೆದಾಟ ತಪ್ಪಲಿದೆ. ಸರ್ವರ್ ಸಮಸ್ಯೆಯೂ ಬಗೆಹರಿಯಲಿದ್ದು, ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡುತ್ತಿದ್ದವರಿಗೆ ಕಡಿವಾಣ ಬೀಳಲಿದೆ. ಫೆಬ್ರವರಿ 2ರಿಂದ ರಾಜ್ಯದ ಮೈಸೂರು, ರಾಮನಗರ, ಮಂಗಳೂರು, ಬೆಳಗಾವಿ, ಚಿಂಚೋಳಿ, ಮಂಡ್ಯದಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆ,

ಸಾಕಷ್ಟು ಅಧ್ಯಯನದ ನಂತರ ಈ ತಂತ್ರಾಂಶ ಅಳವಡಿಸಲಾಗುತ್ತಿದೆ, ಇದರಿಂದ ಹಲವು ಅನುಕೂಲಗಳಾಗಲಿದ್ದು, ಭೂಗಳ್ಳರಿಗೆ ಕಡಿವಾಣ ಬೀಳಲಿದೆ. ಕೆಲವೇ ನಿಮಿಷಗಳಲಿ ನೋಂದಣಿ ಸೇವೆ ಪಡೆಯಬಹುದು. ನೋಂದಣಿ ಪತ್ರಗಳನ್ನು ದಾಖಲೆ ಪತ್ರಗಳನ್ನು ಜನರಿಗೆ ಕೊಡುವುದಿಲ್ಲ. ಅವುಗಳ ಕೋಡ್ ನಂಬರ್ ಕೊಡಲಾಗುತ್ತದೆ. ಕೋಡ್ ನಂಬರ್ ಬಳಸಿ ದೃಢೀಕೃತ ದಾಖಲೆ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...