alex Certify ನಿಮಗೆ ಎಲ್ಲರಿಗಿಂತ ಹೆಚ್ಚು ಸೊಳ್ಳೆ ಕಡಿಯುತ್ತವೆಯಾ…..? ಹಾಗಾದ್ರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಎಲ್ಲರಿಗಿಂತ ಹೆಚ್ಚು ಸೊಳ್ಳೆ ಕಡಿಯುತ್ತವೆಯಾ…..? ಹಾಗಾದ್ರೆ ಈ ಸುದ್ದಿ ಓದಿ

ಮಳೆಗಾಲ ಆರಂಭವಾಗಿ ಹಲವು ದಿನಗಳೇ ಕಳೆದಿದೆ. ಈ ಸಂದರ್ಭದಲ್ಲಿ ಸೊಳ್ಳೆಗಳ ಕಾಟ ತುಸು ಹೆಚ್ಚಾಗಿಯೇ ಇರುತ್ತದೆ. ಗಾತ್ರದಲ್ಲಿ ಸಣ್ಣದಾಗಿದ್ದರೂ ಸಹ ಈ ಸೊಳ್ಳೆ ಕೊಡೋ ಕಾಟ ಯಮಯಾತನೆಯೇ ಸರಿ.

ಸೊಳ್ಳೆ ಕಚ್ಚಿದ ಉರಿ ಒಂದೆಡೆಯಾದರೆ ಆಮೇಲೆ ತುರಿಸಿದಂತ ಅನುಭವ ಕೂಡ ಇನ್ನಷ್ಟು ಕಿರಿಕಿರಿ ಎನಿಸುತ್ತದೆ.

ಆದರೆ ಈ ಸೊಳ್ಳೆಗಳು ಎಲ್ಲರಿಗೂ ಒಂದೇ ರೀತಿಯಲ್ಲಿ ಕಚ್ಚೋದಿಲ್ಲ. ಕೆಲವೊಂದಿಷ್ಟು ಜನರಿಗೆ ಸೊಳ್ಳೆ ಕಾಟ ಎಲ್ಲರಿಗಿಂತ ಜಾಸ್ತಿ ಇರುತ್ತೆ ಅನ್ನೋದನ್ನ ನೀವು ಕೇಳಿರ್ತೀರಾ. ಹಾಗಾದ್ರೆ ಸೊಳ್ಳೆ ತಾನು ಕಚ್ಚುವ ವ್ಯಕ್ತಿಯನ್ನೂ ಆಯ್ಕೆ ಮಾಡಿಕೊಳ್ಳುತ್ತಾ..? ಸೊಳ್ಳೆ ಕೇವಲ ಕೆಲವೇ ವ್ಯಕ್ತಿಗಳನ್ನ ಮಾತ್ರ ಟಾರ್ಗೆಟ್​ ಮಾಡುತ್ತಾ..? ಹೌದು ಎಂದಾದರೆ ಇದಕ್ಕೆ ಕಾರಣವೇನು..? ಇಲ್ಲಿದೆ ಉತ್ತರ….

ವಿಜ್ಞಾನಿಗಳು ನೀಡಿರುವ ಮಾಹಿತಿಯ ಪ್ರಕಾರ ಸೊಳ್ಳೆಗಳು ಕೆಲವರಿಗೆ ತುಸು ಜಾಸ್ತಿಯೇ ಕಚ್ಚುತ್ತವೆ. 2014ರಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಒ ರಕ್ತ ಕಣವನ್ನ ಹೊಂದಿರುವವರಿಗೆ ಸೊಳ್ಳೆಗಳ ಕಾಟ ಜಾಸ್ತಿ ಎಂಬ ವರದಿ ನೀಡಲಾಗಿತ್ತು.

ಫ್ಲೋರಿಡಾ ವಿಶ್ವವಿದ್ಯಾಲಯದ ಸೊಳ್ಳೆಗಳ ತಜ್ಞ ಹಾಗೂ ವೈದ್ಯಕೀಯ ಕೀಟಶಾಸ್ತ್ರಜ್ಞ ಡಾ. ಜೋನಾಥನ್​ ಡೇ ನೀಡಿರುವ ಮಾಹಿತಿಯ ಪ್ರಕಾರ ಸೊಳ್ಳೆಗಳು 0 ರಕ್ತ ಕಣದವರಿಗೆ ಹೆಚ್ಚಾಗಿ ಕಚ್ಚುತವೆ ಎನ್ನಲಾಗಿದೆ. ಇದಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನೂ ಜೋನಾಥನ್​ ಪ್ರಕಟಿಸಿದ್ದಾರೆ.

ಡಾ. ಜೋನಾಥನ್​ ನೀಡಿರುವ ಮಾಹಿತಿಯ ಪ್ರಕಾರ, ಪ್ರತಿಯೊಬ್ಬ ಮನುಷ್ಯನ ಚರ್ಮದಲ್ಲಿ ಸಾಕಷ್ಟು ರಾಸಾಯನಿಕಗಳು ರಹಸ್ಯವಾಗಿ ಇರುತ್ತವೆ. ಇದರಲ್ಲಿ ಲ್ಯಾಕ್ಟಿಕ್​ ಆ್ಯಸಿಡ್​ನಂತಹ ರಾಸಾಯನಿಕ ಸೊಳ್ಳೆಗಳನ್ನ ಹೆಚ್ಚು ಆಕರ್ಷಿಸುತ್ತದೆ. ಇಂತಹ ರಾಸಾಯನಿಕಗಳು ಹೆಚ್ಚೆಚ್ಚು ಉತ್ಪತ್ತಿ ಮಾಡುವ ಚರ್ಮವನ್ನ ಹೊಂದಿರುವವರು ಸೊಳ್ಳೆಗಳ ಕಾಟಕ್ಕೆ ಹೆಚ್ಚಾಗಿ ತುತ್ತಾಗುತ್ತಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...