
ಶಾಲಾ ವಿದ್ಯಾರ್ಥಿಗಳು ಸಾಮೂಹಿಕ ಸನ್ನಿಗೊಳಗಾಗಿ ಜೋರಾಗಿ ಕಿರುಚುತ್ತಾ ಬಿದ್ದು ಹೊರಳಾಡಿರುವುದಲ್ಲದೆ ತಲೆ ಕೂದಲನ್ನು ಕಿತ್ತುಕೊಂಡಿದ್ದು, ಪುಟ್ಟ ಮಕ್ಕಳ ದಿಢೀರ್ ಬದಲಾದ ಈ ವರ್ತನೆಯಿಂದ ಶಿಕ್ಷಕರು ಕಂಗಾಲಾಗಿ ಹೋಗಿದ್ದಾರೆ.
ಇಂಥದೊಂದು ಘಟನೆ ಉತ್ತರಾಖಂಡ್ ನ ಭೋಗೇಶ್ವರದ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕುತೂಹಲದ ಸಂಗತಿ ಎಂದರೆ ಕೆಲ ದಿನಗಳ ಹಿಂದೆ ಪಕ್ಕದ ಆಲಮೋರ, ಪಿತೋರ್ಗರ್ ಮತ್ತು ಚಮೋಲಿ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳು ಇದೇ ತೆರನಾದ ವರ್ತನೆ ತೋರಿದ್ದರು ಎನ್ನಲಾಗಿದೆ.
ಶಿಕ್ಷಕರು, ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಯತ್ನಿಸಿದರೂ ಅಳುತ್ತಾ ಅವರಿಗೇ ಜೋರು ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಇದೀಗ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ ಗೆ ಒಳಪಡಿಸಲು ನಿರ್ಧರಿಸಲಾಗಿದೆ.