alex Certify ವಿಳಾಸ ಕೇಳಲೂ ಇಲ್ಲಿ ನೀಡಬೇಕು ಹಣ….! ತಲುಪಿಸಿದರೆ ಮತ್ತಷ್ಟು ದುಬಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಳಾಸ ಕೇಳಲೂ ಇಲ್ಲಿ ನೀಡಬೇಕು ಹಣ….! ತಲುಪಿಸಿದರೆ ಮತ್ತಷ್ಟು ದುಬಾರಿ

ಜನರು ಹೊಸ ನಗರಕ್ಕೆ ಆಗಮಿಸಿದಾಗ ವಿಳಾಸ ಕೇಳುವುದು ಸಾಮಾನ್ಯ. ವಿಳಾಸ ಕೇಳುವುದನ್ನೇ ಬಿಜಿನೆಸ್​ ಮಾಡಿಕೊಂಡ ದೇಸಿ ವ್ಯಕ್ತಿಯೊಬ್ಬ ಹಾಕಿರುವ ಪೋಸ್ಟ್​ ಬಾರಿ ವೈರಲ್​ ಆಗಿದ್ದು, ನಕ್ಕು ನಗಿಸುವಂತಿದೆ.

ಪ್ರತಿ ಬಾರಿಯೂ ಬಂದು ವಿಳಾಸ ಕೇಳುತ್ತಿರುವ ಜನರಿಂದ ಬೇಸತ್ತ ವ್ಯಾಪಾರಿಯೊಬ್ಬ ಅದನ್ನು ವ್ಯಾಪಾರದ ಅವಕಾಶವಾಗಿ ಪರಿವರ್ತಿಸಿದ್ದಾನೆ. ಟ್ವಿಟರ್ ಬಳಕೆದಾರರಾದ @priyapalnii, ಹಿಂದಿ ಪೋಸ್ಟರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟ್​ನಲ್ಲಿ ವಿಳಾಸ ಕೇಳಿದರೆ ರೂ.5 ಆಗುತ್ತದೆ, ವಿಳಾಸಕ್ಕೆ ತಲುಪಿಸಲು ರೂ. 10 ಆಗುತ್ತದೆ ಎಂದು ಬರೆದಿದ್ದಾರೆ. ಇದನ್ನು ನೋಡಿದವರು ಬಿದ್ದೂ ಬಿದ್ದೂ ನಕ್ಕಿದ್ದು, ತಾವು ಇಂಥದ್ದೇ ಬಿಜಿನೆಸ್​ ಶುರು ಹಚ್ಚಿಕೊಳ್ಳುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ವಿಳಾಸಕ್ಕೆ ತಲುಪಿಸಲು 10 ರೂಪಾಯಿ ಕೇಳಿರುವುದು ಬಹಳ ಕಡಿಮೆಯಾಯಿತು. ವಿಳಾಸಕ್ಕೆ ತಲುಪಿಸಿ ಎಂದರೆ ಅದು ಬಹಳ ದೂರವಿದ್ದರೂ ಅವನು ತಲುಪಿಸುತ್ತಾನೆಯೇ ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...