alex Certify ಬಂಧನಕ್ಕೊಳಗಾಗುವ ಮುನ್ನ ನಟಿಯಿಂದ ಹೈಡ್ರಾಮಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧನಕ್ಕೊಳಗಾಗುವ ಮುನ್ನ ನಟಿಯಿಂದ ಹೈಡ್ರಾಮಾ

ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಚೆನ್ನೈ ಪೊಲೀಸರಿಂದ ಬಂಧಿತಳಾಗಿರುವ ಮಾಡೆಲ್ ಕಂ ಸಿನಿಮಾ ನಟಿ ಮೀರಾ ಮಿಥುನ್‌ರ ವಿಡಿಯೋವೊಂದು ವೈರಲ್ ಆಗಿದೆ.

ಪೊಲೀಸರು ತಮಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಜೋರು ದನಿಯಲ್ಲಿ ಮೀರಾ ಹೇಳಿಕೊಂಡಿದ್ದು, ವಿಡಿಯೋ ಮಾಡಿದ್ದಾರೆ. ತನ್ನ ಮೊಬೈಲ್‌‌ ಅನ್ನು ಹ್ಯಾಂಡ್‌ ಓವರ್‌ ಮಾಡಲು ಹೇಳಿದ ಚೆನ್ನೈ ಪೊಲೀಸರು ತನಗೆ ಕಿರುಕುಳ ಕೊಡುತ್ತಿದ್ದಾರೆ ಎಂದಿರುವ ಮೀರಾ, ತನ್ನ ಮೇಲೆ ಪೊಲೀಸರು ಕೈ ಇಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ.

ಮಗುವಿನ ಮಸಾಜ್ ಗೆ ಯಾವ ಋತುವಿನಲ್ಲಿ ಯಾವ ಎಣ್ಣೆ ಉತ್ತಮ ಗೊತ್ತಾ……?

ತನ್ನ ಚಿತ್ರವೊಂದನ್ನು ಕದ್ದು ಚಿತ್ರವೊಂದರ ಮೊದಲ ಲುಕ್‌ಗೆ ಬಳಸಿದ ಆರೋಪ ಮಾಡಿ ನಿರ್ದೇಶಕರೊಬ್ಬರ ಮೇಲೆ ದೂರುತ್ತಿದ್ದ ಮೀರಾರ ವಿಡಿಯೋವೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಎಸ್‌ಸಿ-ಎಸ್‌ಟಿ ಸಮುದಾದ ವಿರುದ್ಧ ಅವಹೇಳನಾಕಾರಿ ಹೇಳಿಕೆ ಕೊಟ್ಟ ಆಪಾದನೆ ಮೇಲೆ ವಿದುತಲೈ ಸಿರುತಾಯ್ಗಳ ಕಚ್ಚಿ ಪಕ್ಷದ ವಾಣಿ ಅರಸು ಕೊಟ್ಟ ದೂರಿನ ಮೇಲೆ ಮೀರಾ ವಿರುದ್ಧ ಪ್ರಕರಣ ದಾಖಲಾಗಿದೆ.

ಜನಪ್ರಿಯ ವ್ಯಕ್ತಿಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಖಯಾಲಿ ಇರುವ ಮೀರಾ ಈ ಹಿಂದೆ ಬಹಳಷ್ಟು ಬಾರಿ ವಿವಾದ ಸೃಷ್ಟಿಸಿದ್ದರೂ ಸಹ ಯಾವುದೇ ರೀತಿಯ ಕಾನೂನಾತ್ಮಕ ಕ್ರಮಕ್ಕೆ ಸಿಲುಕಿರಲಿಲ್ಲ. ಆದರೆ ಈ ಬಾರಿ ಯಾಕೋ ಆಕೆಯ ಅದೃಷ್ಟ ಕೆಟ್ಟಂತೆ ಕಾಣುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...