alex Certify ವಿದ್ಯಾರ್ಥಿಗಳೇ ಗಮನಿಸಿ : 2023-24 ನೇ ಸಾಲಿನ ಸರ್ಕಾರಿ ಕೋಟಾ `B.Ed’ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳೇ ಗಮನಿಸಿ : 2023-24 ನೇ ಸಾಲಿನ ಸರ್ಕಾರಿ ಕೋಟಾ `B.Ed’ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು :  2023-24ನೇ ಶೈಕ್ಷಣಿಕ ಸಾಲಿಗೆ ಎರಡು ವರ್ಷಗಳ ಬಿ.ಇಡಿ. ಪದವಿಯ ವ್ಯಾಸಂಗಕ್ಕಾಗಿ ದಾಖಲಾತಿ ವಿಶ್ವವಿದ್ಯಾಲಯಗಳಿಂದ ಸಲ್ಲಿಕೆಯಾದ ಬಿ.ಇಡಿ ಶಿಕ್ಷಣ ಮಹಾವಿದ್ಯಾಲಯಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಸೀಟುಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಇಲಾಖಾ ವೆಬ್‌ ಸೈಟ್ https://schooleducation.karnataka.gov.in/ ನ ಲಿಂಕ್ ಮೂಲಕ ಆನ್‌ಲೈನ್‌ ಅರ್ಜಿಯನ್ನು ಭರ್ತಿ ಮಾಡಬೇಕಾಗಿದೆ.

ಆನ್‌ಲೈನ್‌ ಅರ್ಜಿಯನ್ನು ಭರ್ತಿ ಮಾಡುವ ಮುನ್ನ ವೆಬ್‌ಸೈಟ್‌ನಲ್ಲಿರುವ “Instructions to the candidates” ಶೀರ್ಷಿಕೆಯಡಿಯಲ್ಲಿ ನೀಡಿರುವ ಮಾಹಿತಿಯಂತೆ ಅರ್ಜಿಗಳನ್ನು ಭರ್ತಿಮಾಡುವುದು, ಅಭ್ಯರ್ಥಿಗಳು “ONLINE” ಮೂಲಕ ಅರ್ಜಿಗಳನ್ನು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಭರ್ತಿ ಮಾಡಿ, ಅರ್ಜಿ ಸಲ್ಲಿಸಲು ದಿನಾಂಕ 31/10/2023 ರಿಂದ 29/11/22023 ರ ವರೆಗೆ ಆನ್ ಲೈನ್ ನಲ್ಲಿ ಅವಕಾಶ ಇರುತ್ತದೆ.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ತಮ್ಮ User ID ಮತ್ತು Password ಅನ್ನು ನಮೂದಿಸಿ ಲಾಗಿನ್ ಆಗಿ ಅರ್ಜಿಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಯು ತನ್ನ User name ಮತ್ತು Password ಅನ್ನು ಗೌಪ್ಯವಾಗಿಟ್ಟುಕೊಳ್ಳತಕ್ಕದ್ದು ಮತ್ತು ಆನ್‌ಲೈನ್‌ ಅರ್ಜಿಯ ಸಂಬಂಧ ಎಷ್ಟೇ ಬಾರಿ Login ಆದರೂ ಕಡ್ಡಾಯವಾಗಿ Logout ಆಗಬೇಕಾಗಿರುತ್ತದೆ. ಅಭ್ಯರ್ಥಿಯ Logout ಆಗದೇ ಅರ್ಜಿಗಳಲ್ಲಿ ಮಾಹಿತಿಯಲ್ಲಿ ವ್ಯತ್ಯಾಸಗಳುಂಟಾದಲ್ಲಿ ಕೇಂದ್ರೀಕೃತ ದಾಖಲಾತಿ ಘಟಕ ಜವಾಬ್ದಾರಿಯಾಗಿರುವುದಿಲ್ಲ.

 ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ:

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವ ಮೊದಲು  ಶಿಕ್ಷಣ  ಇಲಾಖೆಯ https://schooleducation.karnataka.gov.in/ ನಲ್ಲಿ ನೀಡಲಾಗಿರುವ ಸೂಚನೆಗಳನ್ನು ಗಮನಿಸುವುದು. ಸ್ಕ್ಯಾನ್ ಮಾಡಿದ ಅಭ್ಯರ್ಥಿಯ ಭಾವಚಿತ್ರ (50KBಗೆ ಮೀರದಂತೆ) ಹಾಗೂ ಸಹಿಯನ್ನು (50KBಗೆ ಮೀರದಂತೆ) ಅಪ್‌ಲೋಡ್ ಮಾಡುವುದು.

ಅಭ್ಯರ್ಥಿಗಳು ಪರಿಶೀಲನೆಗೆ ಆಯ್ಕೆ ಮಾಡಿಕೊಳ್ಳ ಬಯಸುವ ಜಿಲ್ಲಾ ನೋಡಲ್ ಕೇಂದ್ರ ವ್ಯವಸ್ಥಾಪಕ ಕೇಂದ್ರ (ಡಯಟ್/ಸಿ.ಟಿ.ಇ)ಗಳ ಪಟ್ಟಿಯನ್ನು ಅನುಬಂಧ-04ರಲ್ಲಿ ನೀಡಲಾಗಿದ್ದು, ಅಭ್ಯರ್ಥಿಗಳು ಪ್ರವೇಶಾತಿ ಬಯಸುವ ಕಾಲೇಜುಗಳನ್ನು ಆದ್ಯತೆವಾರು ಆಯ್ಕೆ ಮಾಡಬೇಕು ಹಾಗೂ ಪರಿಶೀಲನೆಗೆ ಯಾವುದಾದರೂ ಒಂದು ನೋಡಲ್ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಒಮ್ಮೆ ಆಯ್ಕೆ ಮಾಡಲಾದ ಕೇಂದ್ರಗಳ ಬದಲಾವಣೆಗೆ ಅವಕಾಶ ಇರುವುದಿಲ್ಲ. –

2023-24ನೇ ಸಾಲಿಗೆ ವಿಶ್ವವಿದ್ಯಾಲಯಗಳಿಂದ ನೀಡಲಾದ ಬಿ.ಇಡಿ ಕಾಲೇಜುಗಳ ಪಟ್ಟಿಯನ್ನು ಒದಗಿಸಲಾಗಿದೆ.

 ಅಭ್ಯರ್ಥಿಯು ನೀಡುವ ಕಾಲೇಜುಗಳ ಆದ್ಯತೆಯ ಆಯ್ಕೆಯ ಮೇರೆಗೆ ಸೀಟುಗಳ ಹಂಚಿಕೆಯಾಗುವುದರಿಂದ ಗರಿಷ್ಟ ಪ್ರಮಾಣದ ಕಾಲೇಜುಗಳಿಗೆ ಆಯ್ಕೆ ನೀಡಬಹುದಾಗಿರುತ್ತದೆ. (ಆಯ್ಕೆ ಮಿತಿ ಇರುವುದಿಲ್ಲ).

ಅರ್ಹತಾ ಪಟ್ಟಿಯನ್ನು ಪ್ರಕಟಿಸಿದ ನಂತರ ಅಭ್ಯರ್ಥಿಗಳಿಗೆ ಮರು ಆದ್ಯತೆ (Option Entry) ನಮೂದಿಸಲು ಅವಕಾಶ ನೀಡಲಾಗುವುದು. ಅಭ್ಯರ್ಥಿಗಳು ತಮ್ಮ USER ID ಮತ್ತು PASSWORD ಅನ್ನು ಬಳಸಿ ಮತ್ತೊಮ್ಮೆ ಲಾಗಿನ್ ಆಗಿ ಆನ್‌ಲೈನ್ ಅರ್ಜಿಯ ನಿಗದಿತ ಅಂಕಣದಲ್ಲಿ ನಿಗದಿಪಡಿಸಿರುವ ದಿನಾಂಕದೊಳಗೆ ಆದ್ಯತೆಯನ್ನು (Option Entry/Institution Choice) ಬದಲಾಯಿಸಿಕೊಳ್ಳಬಹುದಾಗಿದೆ. Option Entry ಮಾಡಲು ಪ್ರತೀ ಸುತ್ತಿನ ನಂತರವೂ ಅವಕಾಶ ನೀಡಲಾಗುವುದು.

ಕಾಲೇಜುಗಳಲ್ಲಿ ಲಭ್ಯವಿರುವ ಕಾಲೇಜುಗಳ ಸೀಟುಗಳನ್ನು ಸರ್ಕಾರದ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಾನುಸಾರ ಹಂಚಿಕೆ ಮಾಡಲಾಗುತ್ತದೆ. (ಅಭ್ಯರ್ಥಿಯು ಆದ್ಯತೆ ನೀಡದ ಕಾಲೇಜುಗಳಲ್ಲಿ ಸೀಟು ಲಭ್ಯವಿದ್ದರೂ ಹಂಚಿಕೆಯಾಗುವುದಿಲ್ಲ.)

ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್/ಕ್ರೇಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ಅಥವಾ ಬ್ಯಾಂಕ್ ಚಲನ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಮಾತ್ರ ಚಲನ್ ಮೂಲಕ ಶುಲ್ಕ ಪಾವತಿಸುವುದು) ಮೂಲಕವೇ ಪಾವತಿಸತಕ್ಕದ್ದು, ಇನ್ಯಾವುದೇ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ.

 ಅರ್ಜಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಿದ ನಂತರ ಸಲ್ಲಿಸಿರುವ Online ಅರ್ಜಿಯನ್ನು ಲಾಗಿನ್ ಆಗಿ ಮುದ್ರಿಸಿಕೊಳ್ಳುವದು,

ಯಾವುದೇ ಪತ್ರ ವ್ಯವಹಾರಕ್ಕೂ ಈ ಪ್ರತಿಯನ್ನು ಒದಗಿಸುವುದು.

ಸರ್ವರ್ ಒತ್ತಡವನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು. ಕೇಂದ್ರೀಕೃತ ದಾಖಲಾತಿ ಘಟಕದ ಖಾತೆಗೆ ಶುಲ್ಕದ ಹಣ ಪಾವತಿಯಾದಲ್ಲಿ ಮಾತ್ರ ಆನ್‌ಲೈನ್ ಅರ್ಜಿಯ Printout ಲಭ್ಯವಾಗುತ್ತದೆ.

ಅರ್ಜಿಯನ್ನು ಭರ್ತಿ ಮಾಡುವಾಗ ಸರಿಯಾದ ಮಾಹಿತಿಗಳನ್ನು ಭರ್ತಿ ಮಾಡಬೇಕು. ಒಮ್ಮೆ ಭರ್ತಿ ಮಾಡಿ Submit ಮಾಡಿದ ನಂತರ Editಗೆ ಅವಕಾಶವಿರುವುದಿಲ್ಲ.

ರಾಜ್ಯ ಪಠ್ಯಕ್ರಮದ SSLC ಪಾಸಾದ ವಿದ್ಯಾರ್ಥಿಗಳು ತಮ್ಮ ನೊಂದಣಿ ಸಂಖ್ಯೆ ನಮೂದಿಸಿದಲ್ಲಿ ಜನ್ಮ ದಿನಾಂಕ, ತಂದೆ/ತಾಯಿಯವರ ಹೆಸರು Autofetch ಆಗುತ್ತವೆ. CBSE/ICSE ಅಥವಾ ಇತರೆ ರಾಜ್ಯಗಳ ಮಂಡಳಿಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಎಲ್ಲಾ ಅಂಕಣಗಳನ್ನು ಭರ್ತಿ ಮಾಡಬೇಕು.

ಆನ್‌ ಲೈನ್‌ ನಲ್ಲಿ ಶುಲ್ಕ ಪಾವತಿಸುವ ಸಂದರ್ಭದಲ್ಲಿ ಅಭ್ಯರ್ಥಿಯ ಬ್ಯಾಂಕ್‌ ಖಾತೆಯಿಂದ ಹಣ ಕಟಾವಣೆಯಾಗಿ ಕೇಂದ್ರೀಕೃತ ದಾಖಲಾತಿ ಘಟಕದ ಖಾತೆಗೆ ಹಣ ಪಾವತಿಯಾಗದಿದ್ದಲ್ಲಿ, ಈ ಕಛೇರಿಯು ಜವಾಬ್ದಾರಿಯಾಗಿರುವುದಿಲ್ಲ. ಈ ಕುರಿತು ತಾವು ವ್ಯವಹರಿಸಿದ ಬ್ಯಾಂಕನ್ನು ಸಂರ್ಪಕಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...