alex Certify ಘಟಿಕೋತ್ಸವದ ವೇದಿಕೆಯಲ್ಲೇ ʼಕಾಲಾ ಚಶ್ಮಾʼಗೆ ಸ್ಟೆಪ್​ ಹಾಕಿದ ವಿದ್ಯಾರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಘಟಿಕೋತ್ಸವದ ವೇದಿಕೆಯಲ್ಲೇ ʼಕಾಲಾ ಚಶ್ಮಾʼಗೆ ಸ್ಟೆಪ್​ ಹಾಕಿದ ವಿದ್ಯಾರ್ಥಿ

ಬಾಲಿವುಡ್​ ನಟಿ ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅವರ ಕಾಲಾ ಚಶ್ಮಾ ಹಾಡು ಜನಮನದಲ್ಲಿ ಹಿಟ್​ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ದಿನ ನಿತ್ಯ ಸುತ್ತು ಹೊಡೆಯುತ್ತಲೇ ಇರುತ್ತದೆ.

2018ರ ಹಾಡನ್ನು ಕ್ವಿಕ್​ ಸ್ಟೈಲ್​ ತಂಡದಿಂದ ಮತ್ತೊಮ್ಮೆ ಜನಪ್ರಿಯತೆಯನ್ನು ಗಳಿಸಿತು, ನಾರ್ವೇಯನ್​ ಡ್ಯಾನ್ಸ್​ ತಂಡದವರು ತಾವು ಅದಕ್ಕೆ ಸ್ಟೆಪ್​ ಹಾಕುವ ವೀಡಿಯೊವನ್ನು ಹಂಚಿಕೊಂಡಿದ್ದರು. ಈಗ, ಅದು ಅನೇಕರನ್ನು ಅನುಸರಿಸುವಂತೆ ಪ್ರೇರೇಪಿಸಿದೆ.

ಈಗ ವಿದ್ಯಾರ್ಥಿಯೊಬ್ಬ ತನ್ನ ಘಟಿಕೋತ್ಸವದಲ್ಲಿ ಹಾಡಿಗೆ ಸ್ಟೆಪ್​ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಹುಚ್ಚೆದ್ದು ವೈರಲ್​ ಆಗಿದೆ. ವೈರಲ್​ ವಿಡಿಯೋವನ್ನು ಮಹಿರ್​ ಮಲ್ಹೋತ್ರಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಚಿಕ್ಕ ಕ್ಲಿಪ್​ನಲ್ಲಿ, ಮಹಿರ್​ ತನ್ನ ಡಿಗ್ರಿ ಸ್ವೀಕರಿಸುವ ಮುನ್ನ ಚಮತ್ಕಾರಿ ಸ್ಟೆಪ್​ ಮರುಸೃಷ್ಟಿಸುವುದನ್ನು ಕಾಣಬಹುದು.

ವೇದಿಕೆಗೇರುವಾಗ ಎಲ್ಲರೂ ಹುರಿದುಂಬಿಸುತ್ತಿದ್ದಾಗ ಆತ ವಿಶೇಷ ಸ್ಟೆಪ್​ ಹಾಕಲು ಮಂಡಿ ಮತ್ತು ಕೈಯನ್ನು ನೆಲಕ್ಕೂರುತ್ತಾರೆ.

ದಯವಿಟ್ಟು ಇದನ್ನು ಪ್ರಯತ್ನಿಸಬೇಡಿ, ನಾನು ಅದನ್ನು ಪ್ರೋತ್ಸಾಹಿಸುವುದಿಲ್ಲ” ಎಂದು ಪೋಸ್ಟ್​ನ ಶೀರ್ಷಿಕೆ ಇದೆ. ಜಾಲತಾಣದಲ್ಲಿ ಹಂಚಿಕೊಂಡ ನಂತರ ವೀಡಿಯೊ 3 ಮಿಲಿಯನ್​ ವೀಕ್ಷಣೆ ಕಂಡಿದೆ. ಇದನ್ನು ಕಂಡ ನೆಟ್ಟಿಗರು ಬೌಲ್ಡ್​ ಆಗಿದ್ದು ತಮ್ಮ ಆಲೋಚನೆಗಳನ್ನು ಕಾಮೆಂಟ್​ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬರಂತೂ ನಿಮಗೆ ಹೆಚ್ಚು ಧೈರ್ಯವಿದೆ ಎಂದು ಅಭಿಪ್ರಾಯ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...