alex Certify BIG NEWS: ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಸ್ಟುವರ್ಟ್ ಬಿನ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ ಸ್ಟುವರ್ಟ್ ಬಿನ್ನಿ

ಟೀಂ ಇಂಡಿಯಾದ ಆಲ್​ ರೌಂಡರ್​ ಸ್ಟುವರ್ಟ್​ ಬಿನ್ನಿ ಇಂದು ಎಲ್ಲಾ ಮಾದರಿಯ ಕ್ರಿಕೆಟ್​ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. 6 ಟೆಸ್ಟ್​, 14 ಏಕದಿನ ಪಂದ್ಯ ಹಾಗೂ 3 ಟಿಟ್ವೆಂಟಿ ಸರಣಿಗಳಲ್ಲಿ ಬಿನ್ನಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.

ಹ್ಯಾಮಿಲ್ಟನ್​ನಲ್ಲಿ ನಡೆದಿದ್ದ ನ್ಯೂಜಿಲೆಂಡ್​ ವಿರುದ್ಧ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೆ ಪಾದಾರ್ಪಣೆ ಮಾಡಿದ್ದ ಕನ್ನಡಿಗ ಸ್ಟುವರ್ಟ್​ ಬಿನ್ನಿ, ಏಕದಿನ ಪಂದ್ಯದಲ್ಲಿ 230 ರನ್ ಹಾಗೂ 20 ವಿಕೆಟ್​ಗಳನ್ನು ಕಬಳಿಸಿದ್ದಾರೆ.

ಬಿನ್ನಿ ಟೀಂ ಇಂಡಿಯಾದ ಅತ್ಯುತ್ತಮ ಬೌಲರ್​ಗಳ ಪಟ್ಟಿಯಲ್ಲಿ ಈಗಲೂ ಸ್ಥಾನ ಪಡೆದಿದ್ದಾರೆ. 2014ರಲ್ಲಿ ಬಾಂಗ್ಲಾದೇಶದ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ 58 ರನ್​ಗಳಲ್ಲಿ ಅಲೌಟ್​ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸ್ಟುವರ್ಟ್​ ಬಿನ್ನಿ ಟೀಂ ಇಂಡಿಯಾದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ 1983ರಲ್ಲಿ ವಿಶ್ವಕಪ್​ ವಿಜೇತ ಟೀಂ ಇಂಡಿಯಾ ತಂಡದ ಸದಸ್ಯ ರೋಜರ್​ ಬಿನ್ನಿ ಅವರ ಪುತ್ರರಾಗಿದ್ದಾರೆ. ಐಪಿಎಲ್​ ಪಂದ್ಯಾವಳಿಯಲ್ಲಿ ಬಿನ್ನಿ ಮುಂಬೈ ಇಂಡಿಯನ್ಸ್​, ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್​ ತಂಡದ ಪರ ಆಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...