alex Certify ಒತ್ತಡದ ಜೀವನ ನಿಮ್ಮದಾಗಿದ್ರೆ ತಪ್ಪದೇ ಓದಿ ಈ ಸುದ್ದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡದ ಜೀವನ ನಿಮ್ಮದಾಗಿದ್ರೆ ತಪ್ಪದೇ ಓದಿ ಈ ಸುದ್ದಿ….!

ಮಾನಸಿಕ ಒತ್ತಡ ಹೆಚ್ಚಾದಷ್ಟೂ ದೇಹಕ್ಕೆ ಸಂಬಂಧಿತ ಅನಾರೋಗ್ಯ ಹೆಚ್ಚುವುದು ಖಚಿತ ಎಂದು ಅಧ್ಯಯನವೊಂದು ಹೇಳಿದೆ.

ಜರ್ನಲ್ ಸೆಲ್ ಮೆಟಬಾಲಿಸಂನಲ್ಲಿ ಈ ಅಧ್ಯಯನದ ಅಂಶಗಳು ಪ್ರಕಟವಾಗಿದ್ದು, ಒತ್ತಡದಲ್ಲಿದ್ದಾಗ ಮನುಷ್ಯರು ಹೆಚ್ಚು ಆಹಾರ ಸೇವಿಸುತ್ತಾರೆ ಎಂದು ವರದಿ ತಿಳಿಸಿದೆ.

ಹೀಗೆ ಒತ್ತಡದ ಜೊತೆಗೆ ಅಧಿಕ ಕ್ಯಾಲೊರಿಯ ಆಹಾರವೂ ಸೇರಿದರೆ ದೇಹದ ತೂಕ ಹೆಚ್ಚಾಗುತ್ತದೆ. ಅಲ್ಲದೆ ಅದೇ ಆಹಾರ, ಒತ್ತಡವಿಲ್ಲದೆ ಸೇವಿಸಿದಾಗ ತೂಕದ ಪ್ರಮಾಣ ಕಡಿಮೆ ಇರುತ್ತದೆ.

ಹಾಗೇ ಅಧಿಕ ಕ್ಯಾಲೊರಿ ಆಹಾರ ಸೇವಿಸಿದರೆ ಇನ್ಸುಲಿನ್ ಪ್ರಮಾಣ ಹೆಚ್ಚುತ್ತದೆ. ಅದನ್ನೇ ಒತ್ತಡದಲ್ಲಿದ್ದಾಗ ಸೇವಿಸಿದರೆ ದೇಹದಲ್ಲಿನ ಇನ್ಸುಲಿನ್ ಪ್ರಮಾಣ ಹತ್ತು ಪಟ್ಟು ಹೆಚ್ಚುತ್ತದೆ ಎಂದು ವರದಿ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...