alex Certify ಚರ್ಮಕ್ಕೆ ಒಳಗಿನಿಂದ ಕಾಂತಿ ನೀಡುತ್ತೆ ಸ್ಟ್ರಾಬೆರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮಕ್ಕೆ ಒಳಗಿನಿಂದ ಕಾಂತಿ ನೀಡುತ್ತೆ ಸ್ಟ್ರಾಬೆರಿ

ಸ್ಟ್ರಾಬೆರಿ ಚರ್ಮವನ್ನು ಹೈಡ್ರೀಕರಿಸುತ್ತದೆ. ಇದು ನಿಮ್ಮ ಚರ್ಮಕ್ಕೆ ಒಳಗಿನಿಂದ ಕಾಂತಿಯನ್ನು ನೀಡುತ್ತದೆ. ಇದನ್ನು ಎಲ್ಲಾ ಪ್ರಕಾರದ ಚರ್ಮಗಳಿಗೂ ಬಳಸಬಹುದು. ಆದರೆ ಅದನ್ನು ಹೇಗೆ ಬಳಸುವುದು ಎಂಬುದನ್ನು ತಿಳಿದುಕೊಳ್ಳಿ.

ಸಾಮಾನ್ಯ ಹಾಗೂ ಎಣ್ಣೆಯುಕ್ತ ಚರ್ಮ ಹೊಂದಿರುವವರು 6 ಸ್ಟ್ರಾಬೆರಿ ಪೇಸ್ಟ್ ಗೆ ½ ಕಪ್ ಮೊಸರು, ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.

ಸ್ಟ್ರಾಬೆರಿ ಚರ್ಮವನ್ನು ಹೈಡ್ರೇಟ್ ಮಾಡುವುದರಿಂದ ಒಣ ಚರ್ಮ ಹೊಂದಿರುವವರು 6 ಸ್ಟ್ರಾಬೆರಿ ಪೇಸ್ಟ್ ಗೆ 2 ಚಮಚ ಜೇನುತುಪ್ಪ, ಮಾವಿನ ಹಣ್ಣಿನ ತಿರುಳು, 1 ಚಮಚ ಆಲಿವ್ ಆಯಿಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.

ಒಣ ಮತ್ತು ಎಣ್ಣೆ ಮಿಶ್ರಿತ ಚರ್ಮ ಹೊಂದಿರುವವರು 6 ಸ್ಟ್ರಾಬೆರಿ ಪೇಸ್ಟ್ ಗೆ 1 ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...