alex Certify ಆ ನಗರದಲ್ಲಿಲ್ಲ ಒಂದೇ ಒಂದು ರಸ್ತೆ….! ಪ್ರಪಂಚದ ವಿಚಿತ್ರ ನಗರಗಳ ವಿವರ ಇಲ್ಲಿದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆ ನಗರದಲ್ಲಿಲ್ಲ ಒಂದೇ ಒಂದು ರಸ್ತೆ….! ಪ್ರಪಂಚದ ವಿಚಿತ್ರ ನಗರಗಳ ವಿವರ ಇಲ್ಲಿದೆ

World Seven Strange Cities monovi dongguan bengkala huangluo china Santa claus del islote Giethoorn kamikatsu see images | Photos: तस्वीरों में देखें सात अनोखे शहर जो आपको कर देंगे हैरान, कहीं बोट

ದೇಶ ಸುತ್ತು, ಕೋಶ ಓದು ಎನ್ನುವ ಗಾದೆಯಿದೆ. ಕೊರೊನಾ ಸಂದರ್ಭದಲ್ಲಿ ದೇಶ ಸುತ್ತೋದು ಕಷ್ಟ. ಪ್ರಪಂಚದಲ್ಲಿ ವಿಚಿತ್ರ ನಗರಗಳಿವೆ. ಅದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಡಾಂಗ್ಗುವಾನ್ : ಈ ನಗರ ತುಂಬಾ ವಿಚಿತ್ರವಾಗಿದೆ. ಚೀನಾದ ಪೂರ್ವ ಪ್ರದೇಶ ಮತ್ತು ಹಾಂಗ್ ಕಾಂಗ್ ಬಳಿ ಇರುವ ಡೊಂಗ್ಗುವಾನ್ ನಗರದಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರಿದ್ದಾರೆ. ಇಲ್ಲಿನ ಪುರುಷರು ಅನೇಕ ಮಹಿಳೆಯರ ಜೊತೆ ಒಟ್ಟಿಗೆ ಡೇಟಿಂಗ್ ಮಾಡುತ್ತಾರೆ. ಈ ನಗರ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇಲ್ಲಿ ಕೆಲಸ ಪಡೆಯುವುದಕ್ಕಿಂತ ಗೆಳತಿಯನ್ನು ಪಡೆಯುವುದು ಸುಲಭ.

ಗಿಥಾರ್ನ್ : ನೆದರ್‌ಲ್ಯಾಂಡ್ ನ ಈ ನಗರವನ್ನು ಉತ್ತರದ ವೆನಿಸ್ ಎಂದೂ ಕರೆಯುತ್ತಾರೆ. ಇಲ್ಲಿ ನಗರದಾದ್ಯಂತ ಕಾಲುವೆಗಳು ಹರಿಯುತ್ತವೆ. ಹಾಗಾಗಿ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ದೋಣಿ ಮೂಲಕ ಹೋಗುತ್ತಾರೆ. ಇಲ್ಲಿ ಒಂದೇ ಒಂದು ರಸ್ತೆಯೂ ಇಲ್ಲ. ಪ್ರಸ್ತುತ ಇದು ಜನಪ್ರಿಯ ಪ್ರವಾಸಿ ತಾಣವಾಗಿದೆ.

ಪಿಎಂ ಕಿಸಾನ್ ಯೋಜನೆ 9ನೇ ಕಂತು ಬಿಡುಗಡೆ ಮಾಡಿದ ಮೋದಿ: ನಿಮ್ಮ ಖಾತೆಗೆ ಹಣ ಬಂದಿದ್ಯಾ…? ಹೀಗೆ ಚೆಕ್ ಮಾಡಿ

ಕಾಮಿಕತ್ಸು : ಜಪಾನ್‌ನ ಕಾಮಿಕಾತ್ಸು ನಗರವು ಶೂನ್ಯ ತ್ಯಾಜ್ಯ ಪುರಸಭೆಯಾಗುವ ಹಾದಿಯಲ್ಲಿದೆ. ಈ ನಗರವು ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಈ ನಗರದಲ್ಲಿ, ತ್ಯಾಜ್ಯವನ್ನು 45 ರೀತಿಯಲ್ಲಿ ವಿಂಗಡಿಸಲಾಗಿದೆ. ಇಲ್ಲಿಯವರೆಗೆ ಇಲ್ಲಿ ಶೂನ್ಯ ತ್ಯಾಜ್ಯ ಕಾರ್ಯಕ್ರಮವು ತುಂಬಾ ಪರಿಣಾಮಕಾರಿಯಾಗಿದೆ.

ಬೆಂಗಕಾಲಾ : ಇಂಡೋನೇಷ್ಯಾದ ಬಾಲಿಯಲ್ಲಿರುವ ಒಂದು ಸಣ್ಣ ಪಟ್ಟಣ. ಈ ಪಟ್ಟಣದಲ್ಲಿ ಜನರು ಕಾಟ ಕೋಲೋಕ್ ಹೆಸರಿನ ವಿಚಿತ್ರ ಭಾಷೆಯನ್ನು ಮಾತನಾಡುತ್ತಾರೆ. ಕಿವುಡರ ಭಾಷೆ ಎಂಬುದು ಇದರ ಅರ್ಥ. ಈ ಪಟ್ಟಣದಲ್ಲಿ ಕೇವಲ 44 ಜನರು ವಾಸಿಸುತ್ತಿದ್ದಾರೆ. ಕಳೆದ ಆರು ತಲೆಮಾರುಗಳಿಂದ ಇಲ್ಲಿ ಹೆಚ್ಚಿನ ಮಕ್ಕಳು ಕಿವುಡರಾಗಿ ಜನಿಸುತ್ತಿದ್ದಾರೆ. ಅದಕ್ಕಾಗಿಯೇ ಜನರು ಈ ವಿಚಿತ್ರ ಭಾಷೆಯನ್ನು ಬಳಸುತ್ತಿದ್ದಾರೆ.

ಮೊನಾವಿ ಮತ್ತು ಗ್ರಾಸ್ :  ಈ ನಗರಗಳು ಯುಎಸ್ ರಾಜ್ಯದ ನೆಬ್ರಸ್ಕಾದಲ್ಲಿದೆ. ಮೊನೊವಿ ನಗರದಲ್ಲಿ ಒಬ್ಬೇ ಒಬ್ಬ ವಾಸಿಸುತ್ತಿದ್ದಾನೆ. ಗ್ರಾಸ್ ಸಿಟಿಯಲ್ಲೂ ಇದೇ ಪರಿಸ್ಥಿತಿ ಇದೆ. ಈ ನಗರದಲ್ಲಿ ಕೇವಲ ಇಬ್ಬರು ಮಾತ್ರ ವಾಸಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...