alex Certify ʼಸ್ಟೇ ಎಟ್​ ಹೋಮ್​ ಡಾಟರ್ʼ ಪ್ರೊಫೆಷನ್​ ಗೊತ್ತಾ….? ಓದಿ ಈಕೆಯ ಹುಚ್ಚುತನದ ಬಗ್ಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಟೇ ಎಟ್​ ಹೋಮ್​ ಡಾಟರ್ʼ ಪ್ರೊಫೆಷನ್​ ಗೊತ್ತಾ….? ಓದಿ ಈಕೆಯ ಹುಚ್ಚುತನದ ಬಗ್ಗೆ

ನ್ಯೂಯಾರ್ಕ್​ನ ಯುವತಿ ತನ್ನ ಪೋಷಕರ ಹಣವನ್ನು ಐಷಾರಾಮಿ ಅತಿರಂಜಿತ ವಸ್ತುಗಳ ಖರೀದಿಗಳಿಗಾಗಿ ಹಾಳುಮಾಡುತ್ತಿದ್ದು, ಅದು ತನ್ನ ಕೆಲಸ ಎಂದು ವಿವರಿಸುವ ವಿಶೇಷ ವರದಿಯೊಂದು ಅಲ್ಲಿನ ಮಾಧ್ಯಮದಲ್ಲಿ ವರದಿಯಾಗಿದೆ.

ರೋಮಾ ಅಬ್ಡೆಸ್ಸೆಲಾಮ್​ ಎಂಬಾಕೆ ತನ್ನನ್ನು ತಾನು ಪ್ರೊಫೆಷನ್​ ಸ್ಟೇ ಎಟ್​ ಹೋಮ್​ ಡಾಟರ್​ ಎಂದು ಕರೆದುಕೊಳ್ಳುತ್ತಾಳೆ. ಶಾಪಿಂಗ್​ಗೆ ಕೇವಲ ಒಂದು ದಿನದಲ್ಲಿ ಅಂದಾಜು 39 ಲಕ್ಷ ರೂ. ಗಿಂತ ಹೆಚ್ಚು ಖರ್ಚು ಮಾಡಿದ್ದು, ತನ್ನ ಜೀವನಶೈಲಿಯನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸಿದ್ದಾಳೆ. ಆಕೆಯ ದಿಗ್ಭ್ರಮೆಗೊಳಿಸುವ ದೈನಂದಿನ ಖರ್ಚನ್ನು ನೋಡಿ ನೆಟ್ಟಿಗರು ಹೌಹಾರಿದ್ದಾರೆ.

ಶನೆಲ್​, ಗುಸ್ಸಿ, ಪ್ರಾಡಾ ಮತ್ತು ಡಿಯರ್​ ಸೇರಿದಂತೆ ಐಷಾರಾಮಿ ಫ್ಯಾಷನ್​ ಬ್ರ್ಯಾಂಡ್​ಗಳ ವಸ್ತು ಖರೀದಿಯ ಬಿಲ್​ ಪ್ರದರ್ಶನ, ಹಣವನ್ನು ಎಸೆಯುವ ಪೋಸ್ಟ್​ಗಳನ್ನು ಆಗಾಗ್ಗೆ ಪೋಸ್ಟ್ ಮಾಡಿದ್ದು, “ನಾನು ನನ್ನ ಪೋಷಕರ ಹಣವನ್ನು ಸ್ಟೇ ಎಟ್​ ಹೋಮ್​ ಡಾಟರ್​ಗಾಗಿ ಖರ್ಚು ಮಾಡಿದ್ದೇನೆ. ಇದು ಖುಷಿತಂದಿದೆ’ ಎಂದು ಅಬ್ದೆಸ್ಸೆಲಾಮ್​ ಹೇಳಿಕೊಂಡಿದ್ದಾರೆ.

ಕೋವಿಡ್​ ದಾಳಿಗೆ ಮುನ್ನ ಅಬ್ದೆಸ್ಸೆಲಾಮ್​ ಸ್ಕಿನ್​ ಕೇರ್​ ಲೈನ್​ ವ್ಯವಹಾರಕ್ಕೆ ಯೋಜನೆ ರೂಪಿಸಿದ್ದಳು. ಆದರೆ, ಕಳೆದ ಎರಡು ವರ್ಷಗಳಲ್ಲಿ ಆಕೆ ತನ್ನ ವ್ಯಾಪಾರ ಯೋಜನೆಗೆ ಹೆಚ್ಚು ಗಮನ ಕೊಡಲಿಲ್ಲ. ಈಗ ಐಷಾರಾಮಿ ಜೀವನವನ್ನು ಬಯಸಿದ್ದು, ಹಣ ಗಳಿಸುವ ಯೋಜನೆ ಕೈಬಿಟ್ಟಿದ್ದಾಳೆ.

ಪ್ರತಿದಿನ ನಾನು ಬೆಳಿಗ್ಗೆ ಉಪಹಾರ ಸೇವಿಸಿ, ವರ್ಕ್​ ಔಟ್​ ತರಗತಿಗೆ ಹೋಗುತ್ತೇನೆ ಬಳಿಕ ಬರ್ಗ್‌ಡಾಫ್ ಕಾರಿನಲ್ಲಿ ಗೆಳತಿಯರೊಂದಿಗೆ ಶಾಪಿಂಗ್​ ಮಾಡುತ್ತೇನೆ. ಅದು ನನ್ನ ನಿರುದ್ಯೋಗಿ ಜೀವನ ಎಂದು ಹೇಳಿಕೊಂಡಿದ್ದಾಳಾಕೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...