alex Certify ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಭಾರಿ ಇಳಿಕೆ; ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಭಾರಿ ಇಳಿಕೆ; ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 973 ಜನರಿಗೆ ಸೋಂಕು ತಗುಲಿದ್ದು, 1324 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 29,48,228 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 28,92,517 ಜನ ಗುಣಮುಖರಾಗಿದ್ದಾರೆ. 37,293 ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿಂದು 15 ಜನ ಸೋಂಕಿತರು ಮೃತಪಟ್ಟಿದ್ದಾರೆ. 18,392 ಸಕ್ರಿಯ ಪ್ರಕರಣಗಳಿವೆ. ಇವತ್ತು 1,51,219 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.64 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ 264 ಜನರಿಗೆ ಸೋಂಕು ತಗುಲಿದ್ದು, 261 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮೂರು ಜನ ಸೋಂಕಿತರು ಮೃತಪಟ್ಟಿದ್ದಾರೆ. 7343 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ:

ಬಾಗಲಕೋಟೆ 0, ಬಳ್ಳಾರಿ 4, ಬೆಂಗಳೂರು ಗ್ರಾಮಾಂತರ. 6, ಬೀದರ್ 0, ಚಾಮರಾಜನಗರ 9, ಚಿಕ್ಕಬಳ್ಳಾಪುರ 1, ದಾವಣಗೆರೆ 5, ದಾರವಾಡ 6, ಗದಗ 1, ಹಾವೇರಿ 1, ಕಲಬುರ್ಗಿ 1, ಕೊಪ್ಪಳ 2, ರಾಯಚೂರು 0, ರಾಮನಗರ 4, ವಿಜಯಪುರ 0, ಯಾದಗಿರಿ 1 ಪ್ರಕರಣ ವರದಿಯಾಗಿದೆ.

ಬೆಂಗಳೂರು ನಗರ 264, ದಕ್ಷಿಣಕನ್ನಡ 193, ಹಾಸನ 74, ಕೊಡಗು 42, ಕೋಲಾರ 38, ಮೈಸೂರು 73, ಶಿವಮೊಗ್ಗ 38, ಉಡುಪಿ 98, ಉತ್ತರಕನ್ನಡ 39 ಪ್ರಕರಣ ವರದಿಯಾಗಿವೆ.

ಮೃತಪಟ್ಟವರ ಸಂಖ್ಯೆ:

ಬೆಳಗಾವಿ 3, ಬೆಂಗಳೂರು ನಗರ 3, ಚಿಕ್ಕಮಗಳೂರು 1, ಚಿಕ್ಕಬಳ್ಳಾಪುರ 1, ದಕ್ಷಿಣಕನ್ನಡ 1, ಹಾಸನ 1, ಶಿವಮೊಗ್ಗ 1, ತುಮಕೂರು 1, ಉಡುಪಿ 3 ಸೇರಿ ರಾಜ್ಯದಲ್ಲಿ 15 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...