alex Certify 2 ಲಕ್ಷ ರೂ. ಹೂಡಿಕೆಯಿಂದ ವ್ಯವಹಾರ ಶುರು ಮಾಡಿ ಪ್ರತಿ ತಿಂಗಳು ಗಳಿಸಿ 1 ಲಕ್ಷ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ಲಕ್ಷ ರೂ. ಹೂಡಿಕೆಯಿಂದ ವ್ಯವಹಾರ ಶುರು ಮಾಡಿ ಪ್ರತಿ ತಿಂಗಳು ಗಳಿಸಿ 1 ಲಕ್ಷ ರೂ.

ಕೊರೊನಾದಿಂದಾಗಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರ ಆದಾಯ ಕಡಿಮೆಯಾಗಿದೆ. ಹೆಚ್ಚುವರಿ ಹಣ ಗಳಿಕೆಗೆ ಜನರು ಸ್ವಂತ ಉದ್ಯೋಗ ಶುರು ಮಾಡುವ ಯೋಜನೆ ರೂಪಿಸುತ್ತಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಹೆಚ್ಚು ಗಳಿಸುವ ಉದ್ಯೋಗದಲ್ಲಿ ಹಪ್ಪಳದ ಉದ್ಯೋಗ ಕೂಡ ಒಂದು.

ಇದ್ರಲ್ಲಿ ಕೇವಲ 2 ಲಕ್ಷ ರೂಪಾಯಿಗೆ ವ್ಯಾಪಾರ ಶುರು ಮಾಡಿ, ಪ್ರತಿ ತಿಂಗಳು 1 ಲಕ್ಷ ರೂಪಾಯಿವರೆಗೆ ಹಣ ಗಳಿಸಬಹುದಾಗಿದೆ. 2 ಲಕ್ಷ ರೂಪಾಯಿ ಹಣವಿದ್ದರೆ ಸುಲಭವಾಗಿ ವ್ಯವಹಾರ ಶುರು ಮಾಡಬಹುದು. ಒಂದು ವೇಳೆ ಹಣವಿಲ್ಲವೆಂದ್ರೆ, ಸರ್ಕಾರದಿಂದ ಸಾಲ ಪಡೆಯಬಹುದು. ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮದ ಪ್ರಕಾರ, ಮುದ್ರಾ ಯೋಜನೆಯಡಿ ಸಾಲ ಪಡೆಯಬಹುದು.

BIG NEWS: ಮಿತಿ ಮೀರಿದ ಅಧಿಕಾರಿಗಳ ಲಂಚಾವತಾರ; ಕಂದಾಯ ಸಚಿವರಿಗೆ ಪತ್ರ ಬರೆದ ಜಗದೀಶ್ ಶೆಟ್ಟರ್

ಒಟ್ಟು 6 ಲಕ್ಷ ರೂಪಾಯಿಗಳ ಹೂಡಿಕೆಯೊಂದಿಗೆ, ಸುಮಾರು 30 ಸಾವಿರ ಕೆಜಿ ಉತ್ಪಾದನಾ ಸಾಮರ್ಥ್ಯ ಸಿದ್ಧವಾಗಲಿದೆ. ಈ ಸಾಮರ್ಥ್ಯಕ್ಕೆ 250 ಚದರ ಮೀಟರ್ ಸ್ಥಳ ಬೇಕಾಗುತ್ತದೆ. ಈ ವ್ಯವಹಾರವನ್ನು ಆರಂಭಿಸಲು, 6.05 ಲಕ್ಷ ರೂಪಾಯಿ ಖರ್ಚು ಬರುತ್ತದೆ. ಸ್ಥಿರ ಬಂಡವಾಳದಲ್ಲಿ ಎರಡು ಯಂತ್ರಗಳು, ಪ್ಯಾಕೇಜಿಂಗ್ ಯಂತ್ರಗಳು, ಉಪಕರಣಗಳಂತಹ ಎಲ್ಲಾ ವೆಚ್ಚ  ಒಳಗೊಂಡಿದೆ. ಇದರಲ್ಲಿ 3 ತಿಂಗಳ ಸಿಬ್ಬಂದಿಯ ಸಂಬಳ, ಕಚ್ಚಾವಸ್ತು ಮತ್ತು ಯುಟಿಲಿಟಿ ಉತ್ಪನ್ನ ವೆಚ್ಚ ಸೇರಿದೆ. ಬಾಡಿಗೆ, ವಿದ್ಯುತ್, ನೀರು, ದೂರವಾಣಿ ಬಿಲ್ ಮುಂತಾದ ವೆಚ್ಚಗಳನ್ನು ಕೂಡ ಇದರಲ್ಲಿ ಸೇರಿಸಲಾಗಿದೆ.

ನಿಮ್ಮ ಬಳಿ ಸ್ವಂತ ಸ್ಥಳವಿಲ್ಲದೆ ಹೋದ್ರೆ ನೀವು ಬಾಡಿಗೆ ಪಡೆಯಬಹುದು. ತಿಂಗಳಿಗೆ 5 ಸಾವಿರ ರೂಪಾಯಿ ಬಾಡಿಗೆ ಪಾವತಿಸಬೇಕಾಗುತ್ತದೆ. 3 ಕೌಶಲ್ಯರಹಿತ ಕಾರ್ಮಿಕ, 2 ನುರಿತ ಕಾರ್ಮಿಕ ಮತ್ತು ಒಬ್ಬ ಮೇಲ್ವಿಚಾರಕರನ್ನು ಇಟ್ಟುಕೊಳ್ಳಬೇಕಾಗುತ್ತದೆ. ಅವರ ಸಂಬಳಕ್ಕೆ 25,000 ರೂಪಾಯಿ ಖರ್ಚು ಬರಲಿದೆ. ನೀವು ತಯಾರಿಸುವ ಹಬ್ಬಳಕ್ಕೆ ಸರಿಯಾದ ಮಾರುಕಟ್ಟೆ ಒದಗಿಸಿಕೊಂಡಲ್ಲಿ ತಿಂಗಳಿಗೆ ಕೈತುಂಬ ಹಣ ಗಳಿಸಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...