alex Certify ಹಾರ್ದಿಕ್ ರಾಜ್ ಹೊಸ ಪ್ರೊಮೋ ವಿಭಿನ್ನ ರೀತಿಯಲ್ಲಿ ರಿಲೀಸ್ ಮಾಡಿದ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರ್ದಿಕ್ ರಾಜ್ ಹೊಸ ಪ್ರೊಮೋ ವಿಭಿನ್ನ ರೀತಿಯಲ್ಲಿ ರಿಲೀಸ್ ಮಾಡಿದ ಅಭಿಮಾನಿಗಳು

ಭಾರತ ಮತ್ತು ಶ್ರೀಲಂಕಾ ಸರಣಿಯ ಅಧಿಕೃತ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಭಾರೀ ಪ್ರಶ್ನೆಗಳ ಬೆನ್ನಲ್ಲೇ ‘ಹಾರ್ದಿಕ್ ರಾಜ್’ ಎಂಬ ಶೀರ್ಷಿಕೆಯನ್ನು ಹೊಂದಿದ್ದ ಪ್ರೊಮೊ ಡಿಲೀಟ್ ಮಾಡಿ ಹೊಸ ಪ್ರೊಮೊ ಬಿಡುಗಡೆ ಮಾಡಿದೆ. ಅವರು ಅದೇ ಪ್ರೋಮೋವನ್ನು ವಿಭಿನ್ನ ಟೇಕ್‌ನೊಂದಿಗೆ ಟ್ವೀಟ್ ಮಾಡಿದ್ದಾರೆ.

“ಹಾರ್ದಿಕ್ ಪಾಂಡ್ಯ ಹೊಸ ಏಷ್ಯನ್ ಟಿ 20 ಚಾಂಪಿಯನ್‌ ಗಳ ವಿರುದ್ಧ ಅಬ್ಬರದಿಂದ ಹೊಸ ವರ್ಷವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ” ಎಂದು ಹಾರ್ದಿಕ್ ಪಾಂಡ್ಯವನ್ನು ಹೊಂದಿರುವ ಪ್ರೋಮೋವನ್ನು ಟ್ವೀಟ್ ಮಾಡಲಾಗಿದೆ. ಶ್ರೀಲಂಕಾ ನಾಯಕನಾಗಿ ದಾಸುನ್ ಶನಕನನ್ನು ತೋರಿಸುವ ಪ್ರೋಮೋದಲ್ಲಿ ಅವರು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಸರಣಿಯನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ ಎಂದು ವರದಿಯ ಹಿನ್ನೆಲೆಯಲ್ಲಿ ಪ್ರೊಮೋ ಹೊರಬಂದಿದೆ.

ತಜ್ಞರ ಪ್ರಕಾರ ಶ್ರೀಲಂಕಾ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯಾ ನಾಯಕನಾದರೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರಂತವರಿಗೆ ಕೊಡಲಿ ಪೆಟ್ಟು ಬೀಳಲಿದೆ.

ಅದನ್ನೇ ಪುನರುಚ್ಚರಿಸುತ್ತಾ, ಸರಣಿಯ ಹೊಸ ಸ್ಟಾರ್ ಸ್ಪೋರ್ಟ್ಸ್ ಪ್ರೊಮೋ ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದೆ. ಹಾರ್ದಿಕ್ ಪಾಂಡ್ಯ ಏಷ್ಯನ್ T20I ಚಾಂಪಿಯನ್ಸ್ ವಿರುದ್ಧ ಅಬ್ಬರಿಸುವ ಮೂಲಕ ಹೊಸ ವರ್ಷವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ, ಹಾರ್ದಿಕ್ ‘ರಾಜ್’ ಅಡಿಯಲ್ಲಿ ಈ ಹೊಸ ಟೀಮ್‌ಇಂಡಿಯಾದ ಆಟ ವೀಕ್ಷಿಸಲು ಸಿದ್ಧರಾಗಿ,” ಎಂದು ಪ್ರೊಮೋ ಬಿಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...