alex Certify ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ: 25 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ: 25 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

ಸಿಬ್ಬಂದಿ ನೇಮಕಾತಿ ಆಯೋಗವು ಬರೋಬ್ಬರಿ 25271 ಕಾನ್​ಸ್ಟೇಬಲ್​ ಹಾಗೂ ರೈಫಲ್​ಮ್ಯಾನ್​ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನಾಂಕವಾಗಿದೆ.

ಅಧಿಸೂಚನೆಯ ಪ್ರಕಾರ ಬಿಎಸ್​ಎಫ್​, ಸಿಐಎಸ್​ಎಫ್​, ಐಟಿಬಿಪಿ, ಎಸ್​ಎಸ್​ಬಿ, ಎಸ್​ಎಸ್​ಎಫ್​​ ಇಲಾಖೆಯಲ್ಲಿ ಕಾನ್​ಸ್ಟೇಬಲ್​ ಹುದ್ದೆ ಹಾಗೂ ಆಸ್ಸಾಂ ರೈಫಲ್ಸ್​ನಲ್ಲಿ ರೈಫಲ್​ ಮ್ಯಾನ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ

ಬಿಎಸ್‌ಎಫ್ 7545

ಸಿಎಸ್​ಎಫ್​​ 8464

ಎಸ್​ಎಸ್​ಬಿ 3806

ಐಟಿಬಿಪಿ 1431

ಐಟಿಬಿಪಿ 3785

ಎಸ್​ಎಸ್​ಎಫ್​​ 240

ಒಟ್ಟು 25271

ಅರ್ಹತಾ ಮಾನದಂಡ :

ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಇಲಾಖೆಯಲ್ಲಿ 10ನೇ ತರಗತಿ ಉತ್ತೀರ್ಣರಾಗಿರಬೇಕು. ಎನ್​ಸಿಸಿ ಪ್ರಮಾಣ ಪತ್ರ ಹೊಂದಿರುವವರಿಗೆ ಬೋನಸ್​ ಅಂಕ ಸಿಗಲಿದೆ. ಎನ್​ಸಿಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವವರಿಗೆ 5 ಹೆಚ್ಚುವರಿ ಅಂಕ ಸಿಗಲಿದೆ. ಎನ್​ಸಿಸಿ ಬಿ ಹಾಗೂ ಸಿ ಪ್ರಮಾಣ ಪತ್ರ ಹೊಂದಿರುವವರು ಗರಿಷ್ಟ ಅಂಕಗಳ ಮೂರು ಹಾಗೂ 2 ಪ್ರತಿಶತ ಪಡೆಯಲಿದ್ದಾರೆ.

ಶೈಕ್ಷಣಿಕ ಅರ್ಹತೆ ಹೊರತುಪಡಿಸಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಕೂಡ ಇದೆ. ಆಗಸ್ಟ್​ 1ನೇ ತಾರೀಖಿಗೆ ಅನ್ವಯವಾಗುವಂತೆ ಅಭ್ಯರ್ಥಿಗಳು 18 – 23 ವರ್ಷ ಪ್ರಾಯದವರಾಗಿರಬೇಕು. ಅಂದರೆ 1998ರ ಆಗಸ್ಟ್​ 2ಕ್ಕಿಂತ ಮೊದಲು ಹಾಗೂ 2003ರ ಆಗಸ್ಟ್​ 1ರ ಬಳಿಕ ಜನಿಸಿರಬಾರದು.
ಕೆಲವೊಂದು ವರ್ಗದವರಿಗೆ ಗರಿಷ್ಟ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ

ಕಂಪ್ಯೂಟರ್​ ಆಧಾರಿತ ಪರೀಕ್ಷೆ

ದೈಹಿಕ ಸಾಮರ್ಥ್ಯ ಪರೀಕ್ಷೆ

ವೈದ್ಯಕೀಯ ಪರೀಕ್ಷೆ

ದಾಖಲೆ ಪರಿಶೀಲನೆ.

ಅರ್ಜಿ ಸಲ್ಲಿಸುವ ಮಾರ್ಗ 

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಎಸ್​ಎಸ್​ಸಿ ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಗಸ್ಟ್​ 31 ಕೊನೆಯ ದಿನಾಂಕವಾಗಿದೆ.

ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಯಾಗಿದೆ. ಎಸ್ಸಿ, ಎಸ್ಟಿ, ಮಾಜಿ ಯೋಧರಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...