alex Certify ನಟಿ ಶ್ರೀದೇವಿ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ ಯುವತಿ…! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಶ್ರೀದೇವಿ ಡೈಲಾಗ್ ಗೆ ಲಿಪ್ ಸಿಂಕ್ ಮಾಡಿದ ಯುವತಿ…! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

Sridevi's doppelganger Dipali Choudhary sets the Internet on fire. Viral videos - Trending News Newsಸಾಮಾಜಿಕ ಜಾಲತಾಣಗಲ್ಲಿ ಸಾಮಾನ್ಯರು, ಸೆಲೆಬ್ರಿಟಿಗಳ ಸಿನಿಮಾ ಡೈಲಾಗಿಗೆ ಲಿಪ್ ಸಿಂಕ್ ಮಾಡಿ ಅಪ್ಲೋಡ್ ಮಾಡುತ್ತಿರುವುದನ್ನು ನೀವು ನೋಡಿರುತ್ತೀರಿ.

ಹಾಗೆಯೇ ದೀಪಾಲಿ ಚೌಧರಿ ಎಂಬ ಇನ್ಸ್ಟಾಗ್ರಾಂ ಯೂಸರ್ ಆಗಾಗ್ಗೆ ದಿವಂಗತ ನಟಿ ಶ್ರೀದೇವಿಯ ಸಿನಿಮಾಗಳ ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡಿ ವಿಡಿಯೋ ಸಹಿತ ಪೋಸ್ಟ್ ಮಾಡುತ್ತಿರುತ್ತಾರೆ. ಇವರು ನೋಡಲು ಸ್ವಲ್ಪ ಶ್ರೀದೇವಿ ಅವರಿಗೆ ಹೋಲಿಕೆಯಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ದೀಪಾಲಿ ಆಗಾಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿದ್ದು, ಸದ್ಯ ಭಾರಿ ವೈರಲ್ ಆಗಿದ್ದಾರೆ. ಅವರು ಇನ್ಸ್ಟಾಗ್ರಾಂನಲ್ಲಿ 30.2k ಅನುಯಾಯಿಗಳನ್ನು ಹೊಂದಿದ್ದಾರೆ. ನಟಿಯ ಚಲನಚಿತ್ರಗಳ ಪ್ರಸಿದ್ಧ ದೃಶ್ಯಗಳನ್ನು ನಟಿಸುವ ವಿಡಿಯೊಗಳನ್ನು ಈಕೆ ಆಗಾಗ್ಗೆ ಹಂಚಿಕೊಳ್ಳುತ್ತಾರೆ.

ದೀಪಾಲಿ ಚೌಧರಿ ಅವರ ಇತ್ತೀಚಿನ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ, ಅವರು ಶ್ರೀದೇವಿಯವರ ಚಲನಚಿತ್ರ ಲಾಡ್ಲಾ (1994) ದ ದೃಶ್ಯವನ್ನು ಅನುಕರಿಸಿದ್ದಾರೆ. ಚಿತ್ರದಲ್ಲಿ ಅನಿಲ್ ಕಪೂರ್ ಕೂಡ ನಟಿಸಿದ್ದಾರೆ. ಕೆಂಪು ಬಣ್ಣದ ಉಡುಪನ್ನು ಧರಿಸಿರುವ ದೀಪಾಲಿ ಚಿತ್ರದ ಶ್ರೀದೇವಿಯ ಡೈಲಾಗ್‌ಗೆ  ಲಿಪ್ ಸಿಂಕ್ ಮಾಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ ಬಳಿಕ ಭಾರಿ ವೈರಲ್ ಆಗಿದ್ದು, ದೀಪಾಲಿ ನಟಿ ಶ್ರೀದೇವಿಯವರನ್ನೇ ಹೋಲುತ್ತಾರೆ ಎಂದೆಲ್ಲಾ ಅನೇಕರು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಈಕೆಯ ಅದ್ಭುತ ನಟನಾ ಕೌಶಲ್ಯಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...