alex Certify ಸಖತ್ ಸ್ಟೆಪ್ಸ್ ಹಾಕಿದ ಸ್ಪೈಸ್ ಜೆಟ್ ಏರ್ ಹೋಸ್ಟೆಸ್: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಖತ್ ಸ್ಟೆಪ್ಸ್ ಹಾಕಿದ ಸ್ಪೈಸ್ ಜೆಟ್ ಏರ್ ಹೋಸ್ಟೆಸ್: ವಿಡಿಯೋ ವೈರಲ್

ಕೆಲವು ವಾರಗಳ ಹಿಂದೆ, ಇಂಡಿಗೊ ಏರ್ ಹೋಸ್ಟೆಸ್ ಅವರು ಶ್ರೀಲಂಕಾ ಹಾಡು ಮಣಿಕೆ ಮ್ಯಾಗೆ ಹಿತೆಗೆ ನೃತ್ಯ ಮಾಡುವ ವಿಡಿಯೋ ಕ್ಲಿಪ್ ಹಂಚಿಕೊಂಡ ನಂತರ ವೈರಲ್ ಆಗಿತ್ತು.

ಅಂದಿನಿಂದ, ಕ್ಯಾಬಿನ್ ಸಿಬ್ಬಂದಿಗಳಲ್ಲಿ ಇಂತಹ ನೃತ್ಯ ದಿನಚರಿಯು ಒಂದು ಪ್ರವೃತ್ತಿಯಾಗಿ ಮಾರ್ಪಟ್ಟಿದೆ. ಇದೀಗ ಸ್ಪೈಸ್ ಜೆಟ್ ಏರ್ ಹೋಸ್ಟೆಸ್ ತರಬೇತಿ ಕೇಂದ್ರದಲ್ಲಿ ಸ್ನೇಹಿತೆಯರು ಸೇರಿ ಜನಪ್ರಿಯ ಹಾಡಿಗೆ ಸೊಂಟ ಬಳುಕಿಸಿದ್ದಾರೆ.

ಒಬ್ಬರ ಹಿಂದೆ ಒಬ್ಬರ ನಿಂತು ಯುವತಿಯರು ಸ್ಟೆಪ್ಸ್ ಹಾಕಿದ್ದಾರೆ. ಜಸ್ಟಿನ್ ಬೀಬರ್ ಅವರ ‘ಸ್ಟೇ’ಗೆ ಗ್ರೂವ್ ಗೆ ಡ್ಯಾನ್ಸ್ ಮಾಡಿದ್ದಾರೆ. ಸ್ಟೆಪ್ಸ್ ಹಾಕಿದ ಉಮಾ ಮೀನಾಕ್ಷಿ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ‘ನೀವು ಯಾವಾಗ ತರಬೇತಿ ಕೇಂದ್ರದಲ್ಲಿದ್ದೀರಿ’ ಎಂಬ ಶೀರ್ಷಿಕೆಯೊಂದಿಗೆ ಮತ್ತು ‘ಲವ್‌ ಯುವರ್‌ಸೆಲ್ಫ್’, ‘ಸ್ಪೈಸ್‌ಜೆಟ್‌ಕ್ರೂ’, ಸ್ಪೈಸ್‌ಜೈಟರ್‌ಹೋಸ್ಟೆಸ್’, ‘ಕ್ಯಾಬಿಕ್ರ್ಯೂ’ ಮತ್ತು ಇತರ ಹಲವು ಹ್ಯಾಶ್‌ಟ್ಯಾಗ್‌ಗಳೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಸದ್ಯ ಈ ವಿಡಿಯೊ ವೈರಲ್ ಆಗಿದ್ದು, 6800 ಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವಾರು ಪ್ರತಿಕ್ರಿಯೆಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...