alex Certify ‘ಲೇಜಿ ಲಾಡ್‌’ಗೆ ಸೊಂಟ ಬಳುಕಿಸಿದ ಗಗನಸಖಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಲೇಜಿ ಲಾಡ್‌’ಗೆ ಸೊಂಟ ಬಳುಕಿಸಿದ ಗಗನಸಖಿ: ವಿಡಿಯೋ ವೈರಲ್

ಇಂಡಿಗೋ ಗಗನಸಖಿಯೊಬ್ಬರು ಪ್ರಯಾಣಿಕರಿಲ್ಲದೇ ಇದ್ದಾಗ ವಿಮಾನದಲ್ಲಿ ಮನಿಕೆ ಮಗೆ ಹಿತೆಗೆ ನೃತ್ಯ ಮಾಡಿದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ, ಇದೀಗ ಇತರ ಕ್ಯಾಬಿನ್ ಸಿಬ್ಬಂದಿ ಬೇರೆ-ಬೇರೆ ಹಾಡುಗಳಿಗೆ ನೃತ್ಯ ಮಾಡುವ ಹಲವಾರು ತುಣುಕುಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.

ಹೌದು, ಸ್ಪೈಸ್‌ಜೆಟ್ ಗಗನಸಖಿ ಉಮಾ ಮೀನಾಕ್ಷಿ ಎಂಬುವವರು ಈ ಹಿಂದೆ ‘ನವ್ರಾಯ್ ಮಾಝಿ’ಗೆ ಸೊಂಟ ಬಳುಕಿಸಿದ್ದರು. ಈ ನೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಟ್ರೆಂಡ್ ಆಗಿದ್ದು, ಇದೀಗ ಹೊಸ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಹೊಸ ವಿಡಿಯೋದಲ್ಲಿ ಉಮಾ ಮೀನಾಕ್ಷಿ ಅವರು ವಿಮಾನ ನಿಲ್ದಾಣದಲ್ಲಿ ‘ಲೇಜಿ ಲಾಡ್’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಬಳಕೆದಾರರು ಪ್ರಸ್ತುತ ಜನಪ್ರಿಯ ಹಾಡುಗಳಿಗೆ ನೃತ್ಯ ಮಾಡುವ ಗೀಳನ್ನು ಹೊಂದಿದ್ದು, ಒಬ್ಬರಿಗೊಬ್ಬರು ಸವಾಲು ಹಾಕುತ್ತಿದ್ದಾರೆ. ಗಗನಸಖಿಯು ಈ ಸವಾಲನ್ನು ಸಂಪೂರ್ಣವಾಗಿ ನಿಭಾಯಿಸಿದ್ದಾರೆ.

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, 53,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಗಗನಸಖಿಯ ಅದ್ಭುತ ನೃತ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...