alex Certify ಖಾಲಿ ವಿಮಾನದಲ್ಲಿ ʼಮೇರಾ ಯಾರ್‌ʼ ಹಾಡಿಗೆ ಸ್ಟೆಪ್ ಹಾಕಿದ ಗಗನಸಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ವಿಮಾನದಲ್ಲಿ ʼಮೇರಾ ಯಾರ್‌ʼ ಹಾಡಿಗೆ ಸ್ಟೆಪ್ ಹಾಕಿದ ಗಗನಸಖಿ

ಸ್ಪೈಸ್‌ಜೆಟ್ ವಿಮಾನವೊಂದರಲ್ಲಿ ಗಗನಸಖಿ ಉಮಾ ಮೀನಾಕ್ಷಿ ಅವರು ನವ್ರಾಯಿ ಮಜ್ಹಿ ಮತ್ತು ಲೇಜ಼ಿ ಲ್ಯಾಡ್‌ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಆನ್ಲೈನ್‌ನಲ್ಲಿ ವೈರಲ್ ಆಗಿದ್ದರು. ಈ ಬಾರಿ, ಉಮಾ ಮತ್ತೊಂದು ವಿಡಿಯೋದೊಂದಿಗೆ ಬಂದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ವಿಡಿಯೋ ಶೇರ್‌ ಮಾಡಿಕೊಂಡ ಉಮಾ, ಧ್ವಾನಿ ಭಾನುಶಾಲಿರ ಹಾಡು ಮೇರಾ ಯಾರ್‌ಗೆ ಸ್ಟೆಪ್ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಡಿಸೆಂಬರ್‌ 18ರಂದು ಪೋಸ್ಟ್ ಮಾಡಲಾದ ಈ ವಿಡಿಯೋ ಅದಾಗಲೇ 14,000+ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ನಿರೀಕ್ಷೆಯಲ್ಲಿದ್ದ ರೈತರ ಮಕ್ಕಳಿಗೆ ಶಾಕ್: ಪಹಣಿ ನಿಯಮದಿಂದ ಅನೇಕರಿಗೆ ಸಿಗದ ಸೌಲಭ್ಯ…?

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಖಾಲಿ ವಿಮಾನದಲ್ಲಿ ಈ ಕ್ಯಾಚಿ ಟ್ಯೂನ್‌ಗೆ ಸ್ಟೆಪ್ ಹಾಕಿದ್ದಾರೆ ಉಮಾ. ವಿಡಿಯೋವನ್ನು ಆಕೆಯ ಸಹೋದ್ಯೋಗಿಗಳಲ್ಲಿ ಒಬ್ಬರು ರೆಕಾರ್ಡ್ ಮಾಡಿದ್ದಾರೆ. ಆಕೆಯ ಅಪ್‌ಬೀಟ್ ಸ್ಟೆಪ್‌ಗಳು ಮತ್ತು ಆಕೆಯ ಮುಖಭಾವಗಳು ನೆಟ್ಟಿಗರಿಗೆ ಭಾರೀ ಇಷ್ಟವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...