ದುರ್ಗಾ ಮೂರ್ತಿಯ ವಿಸರ್ಜನೆ ಮೆರವಣಿಗೆ ಹೊರಟಿದ್ದ ಗುಂಪೊಂದರ ಮೇಲೆ ಎಸ್‌ಯುವಿಯೊಂದು ನುಗ್ಗಿ ಬಂದ ಪರಿಣಾಮ ಒಬ್ಬರು ಮೃತಪಟ್ಟು 16 ಮಂದಿ ಗಾಯಗೊಂಡ ಘಟನೆ ಛತ್ತೀಸ್‌ಘಡದ ಜಶ್ಪುರದಲ್ಲಿ ಜರುಗಿದೆ.
ಗಾಯಗೊಂಡ ಎಲ್ಲರನ್ನೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಕಂದಹಾರ್‌ನ ಶಿಯಾ ಮಸೀದಿಯಲ್ಲಿ ಸ್ಫೋಟ: 16 ಮಂದಿ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ
ಈ ಅಪಘಾತವು ’ಬಹಳ ದುಃಖಕರ ಹಾಗೂ ಹೃದಯವಿದ್ರಾವಕ’ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಭೂಪೇಶ್ ಭಗೇಲ್, ಆಪಾದಿತರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.
“ಆಪಾದಿತರನ್ನು ಕೂಡಲೇ ಬಂಧಿಸಲಾಗಿದೆ. ಮೇಲುನೋಟಕ್ಕೆ ತಪ್ಪಿತಸ್ಥರು ಎಂದು ಕಾಣುವ ಪೊಲೀಸ್ ಸಿಬ್ಬಂದಿ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗಿದೆ. ತನಿಖೆಗೆ ಆದೇಶಿಸಲಾಗಿದ್ದು, ಯಾರನ್ನೂ ಬಿಡುವುದಿಲ್ಲ. ಎಲ್ಲರಿಗೂ ನ್ಯಾಯ ಒದಗಿಸಲಾಗುವುದು,” ಎಂದು ಭಗೇಲ್ ಟ್ವೀಟ್ ಮಾಡಿದ್ದಾರೆ.
ಮಂಚದ ಕೆಳಗಿದ್ದ ವಿಶ್ವದ ಅತಿದೊಡ್ಡ ಜೇಡ ನೋಡಿ ವ್ಯಕ್ತಿಗೆ ಶಾಕ್..!
ಎಸ್‌ಯುವಿಯ ಚಾಲಕನನ್ನು ಹಿಡಿದುಕೊಂಡ ಸ್ಥಳೀಯರು ಆತನನ್ನು ಚೆನ್ನಾಗಿ ಥಳಿಸಿದ್ದಾರೆ ಎಂದು ಜಶ್ಪುರದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಕಾರಿನಲ್ಲಿದ್ದ ಇಬ್ಬರೂ ಗಾಂಜಾ ಹೊತ್ತೊಯ್ಯುತ್ತಿದ್ದು, ಸಾಕ್ಷ್ಯ ನಾಶ ಮಾಡಲು ಕಾರನ್ನು ಸುಟ್ಟು ಹಾಕಿದ್ದಾರೆ ಎಂದು ಸ್ಥಳೀಯರು ಆಪಾದಿಸಿದ್ದಾರೆ.
ಇಲ್ಲಿನ ಪಟ್ಲಾಗಾಂವ್ ಪೊಲೀಸ್ ಠಾಣೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಜನ ನೆರೆದು ಕೆಲ ಕಾಲ ಆತಂಕದ ವಾತಾವರಣ ನೆಲೆಸಿತ್ತು.
SHOCKING NEWS: ತಾಯಿ-ಮಗನಿಗೆ ಗುಂಡಿಕ್ಕಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಡ್ರಗ್ ಮಾಫಿಯಾದ ಜಾಲ ರಾಜ್ಯದಲ್ಲಿ ವ್ಯಾಪಕವಾಗಿದ್ದು, ಇವರಿಗೆ ಭಯವೇ ಇಲ್ಲದಂತಾಗಿದೆ ಎಂದು ಆಪಾದಿಸಿದ ವಿರೋಧ ಪಕ್ಷದ ನಾಯಕ ರಮಣ್ ಸಿಂಗ್, ಗಾಯಾಳುಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಿ, ಕರ್ತವ್ಯ ಲೋಪವೆಸಗಿದ ಜಶ್ಪುರ ಎಸ್ಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.