alex Certify ಪಾಕ್-ಬಾಂಗ್ಲಾ ಪಂದ್ಯದ ವೇಳೆ ಈಡನ್ ಗಾರ್ಡನ್ಸ್ ನಲ್ಲಿ ಪ್ಯಾಲೆಸ್ಟ್ರೈನ್ ಧ್ವಜ ಹಾರಿಸಿ ಘೋಷಣೆ ಕೂಗಿದ ಪ್ರೇಕ್ಷಕರು! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್-ಬಾಂಗ್ಲಾ ಪಂದ್ಯದ ವೇಳೆ ಈಡನ್ ಗಾರ್ಡನ್ಸ್ ನಲ್ಲಿ ಪ್ಯಾಲೆಸ್ಟ್ರೈನ್ ಧ್ವಜ ಹಾರಿಸಿ ಘೋಷಣೆ ಕೂಗಿದ ಪ್ರೇಕ್ಷಕರು!

ಕೋಲ್ಕತ್ತಾ : ಹಮಾಸ್, ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದ್ದು, ಈ ನಡುವೆ  ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನ-ಬಾಂಗ್ಲಾದೇಶದ ನಡುವಿನ ಪಂದ್ಯದಲ್ಲಿ ಕೆಲವರು ಪ್ಯಾಲೆಸ್ಟ್ರೈನ್ ಧ್ವಜವನ್ನು ಹಿಡಿದು ಘೋಷಣೆಗಳನ್ನು ಕೂಗಿರುವ ಘಟನೆ ನಡೆದಿದೆ.

ವಿಶ್ವಕಪ್ 2023 ರ 31 ನೇ ಪಂದ್ಯವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ಈಡನ್ ಗಾರ್ಡನ್ಸ್ನಲ್ಲಿ ನಡೆಯುತ್ತಿರುವ ವೇಳೆ ಕೆಲ ಪ್ರೇಕ್ಷಕರು ಪ್ಯಾಲೆಸ್ಟ್ರೈನ್ ಧ್ವಜವನ್ನು ಹಿಡಿದು ಪ್ಯಾಲೆಸ್ಟ್ರೈನ್ ಪರ ಘೋಷಣೆಗಳನ್ನು ಕೂಗಿರುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಪಂದ್ಯದ ವೇಳೆ ವೈರಲ್ ಆಗಿದೆ. ಇದಕ್ಕೂ ಮುನ್ನ ಅಕ್ಟೋಬರ್ 28 ರಂದು ಈಡನ್ ಗಾರ್ಡನ್ಸ್ನಲ್ಲಿ ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ನಡುವೆ ಪಂದ್ಯ ನಡೆದಿತ್ತು. ನವೆಂಬರ್ 05 ರಂದು ಈಡನ್ ಗಾರ್ಡನ್ಸ್ನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಸೆಣಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...