alex Certify ʼಮತದಾರರ ಪಟ್ಟಿʼ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮತದಾರರ ಪಟ್ಟಿʼ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024ರ ಸಂಬಂಧ ಪೂರ್ವ ಸಿದ್ದತಾ ಚಟುವಟಿಕೆಗಳು ಕೈಗೊಳ್ಳುತ್ತಿದ್ದು, ಸದರಿ ಚಟುವಟಿಕೆಯ ಮುಖ್ಯ ಭಾಗವಾದ ಮನೆ ಮನೆ ಭೇಟಿ ಸಮೀಕ್ಷೆಯು ದಿನಾಂಕ: 01/08/2023 ರಿಂದ 21/08/2023 ರವರೆಗೆ ನಡೆಯಲಿದೆ ಎಂದು ಕೋಲಾರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಅಕ್ರಂ ಪಾಷ ತಿಳಿಸಿದ್ದಾರೆ.

ಸದರಿ ಸಮೀಕ್ಷೆಯಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆ ಹಂತದ ಅಧಿಕಾರಿಗಳು ಅವರ ಮತಗಟ್ಟೆ ವ್ಯಾಪ್ತಿಯಲ್ಲಿರುವ ಎಲ್ಲಾ ಮತದಾರರ ಮನೆಗೆ ಭೇಟಿ ನೀಡಿ ಈ ಕೆಳಕಂಡ ಮಾಹಿತಿಯನ್ನು ಬಿ.ಎಲ್.ಒ ರವರು ಸಂಗ್ರಹಿಸುತ್ತಾರೆ.

ಮತದಾರರ ಪಟ್ಟಿಗೆ ನೋಂದಣಿಯಾಗದೆ ಇರುವ ಅರ್ಹ ಮತದಾರರು (ಅರ್ಹತಾ ದಿನಾಂಕ: 01.10.2023), ನಿರೀಕ್ಷಿತ ಮತದಾರರು (ಅರ್ಹತಾ ದಿನಾಂಕ: 01.01.2024), ನಿರೀಕ್ಷಿತ ಮತದಾರರು (ಮುಂದಿನ ಮೂರು ನಂತರದ ಅರ್ಹತಾ ದಿನಾಂಕಗಳಲ್ಲಿ ಅರ್ಹರಾಗುವ ಮತದಾರರು), ದ್ವಿಮುದ್ರಣ/ಮೃತ/ಶಾಶ್ವತ ಸ್ಥಳಾಂತರಗೊಂಡ ಮತದಾರರ ಮಾಹಿತಿ, ಮತದಾರರ ಪಟ್ಟಿಯಲ್ಲಿರುವ ಮತದಾರರ ನಮೂದಿನ ತಿದ್ದುಪಡಿಗೊಳಿಸುವ ಮಾಹಿತಿ.

ಜಿಲ್ಲೆಯ ಎಲ್ಲಾ ಮತಗಟ್ಟೆಗಳ ವ್ಯಾಪಿಯಲ್ಲಿ ಮತಗಟ್ಟೆ ಹಂತದ ಅಧಿಕಾರಿಗಳು ಈಗಾಗಲೇ ಮನೆ ಮನೆ ಭೇಟಿ ಸಮೀಕ್ಷೆಯನ್ನು ಕೈಗೊಳ್ಳುತ್ತಿದ್ದು, ಸದರಿ ಸಮೀಕ್ಷೆಯಿಂದ ಮತದಾರರು ಈ ಕೆಳಕಂಡ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ತಮ್ಮ ಮತದಾರರ ಗುರುತಿನ ಚೀಟಿಯಲ್ಲಿ (ಹೆಸರು, ಸಂಬಂಧಿಕರ ಹೆಸರು, ಜನ್ಮ ದಿನಾಂಕ, ವಿಳಾಸ, ಭಾವಚಿತ) ತಿದ್ದುಪಡಿಗಳು ಇದ್ದಲ್ಲಿ, ನಮೂನೆ-8ರಲ್ಲಿ ಬಿ.ಎಲ್.ಒ ರವರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಮನೆ ಸಂಖ್ಯೆ ತಿದ್ದುಪಡಿ ಇದ್ದಲ್ಲಿ ನಮೂನೆ-8ರಲ್ಲಿ ಬಿ.ಎಲ್.ಒ ರವರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ನಾಲ್ಕು ಅರ್ಹತಾ ದಿನಾಂಕಗಳಿಗೆ ( 1ನೇ ಜನವರಿ, 1ನೇ ಏಪ್ರಿಲ್, 1ನೇ ಜುಲೈ, 1ನೇ ಅಕ್ಟೋಬರ್) ಅರ್ಹರಾಗುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಬಹುದು.

ಯಾವುದಾದರೂ ಮತದಾರರು 01.01.2024ಕ್ಕೆ ಅನ್ವಯಿಸುವಂತೆ 18 ವರ್ಷ ತುಂಬುವ ಮತದಾರರು (Prospective Voters) ಇದ್ದಲ್ಲಿ ಅಂತಹವರ ಹೆಸರನ್ನು ನಮೂನೆ-6ರಲ್ಲಿ ಬಿ.ಎಲ್.ಒ ರವರು ಮನೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬಹುದು.

ಮೃತ ಮತದಾರರು, ಸ್ಥಳಾಂತರಗೊಂಡ ಮತದಾರರು, ದ್ವಿಮುದ್ರಣ ಮತದಾರರನ್ನು ಮತದಾರರ ಪಟ್ಟಿಯಿಂದ ನಮೂನೆ-7ರಲ್ಲಿ ತೆಗೆದುಹಾಕಲು ಅರ್ಜಿಯನ್ನು ಸಲ್ಲಿಸಬಹುದು.

ಮತದಾರರ ಪಟ್ಟಿಗೆ ನೋಂದಣಿ ಆಗದೇ ಇರುವ ಮತದಾರರು ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು. ಈ ಸೌಲಭ್ಯಗಳನ್ನು ಮತದಾರರು ಪಡೆದುಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...