alex Certify ಗಾಂಧಿ ಪ್ರತಿಮೆ ಬಳಿ ಬಿಕ್ಕಿ ಬಿಕ್ಕಿ ಅತ್ತ SP ನಾಯಕ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಂಧಿ ಪ್ರತಿಮೆ ಬಳಿ ಬಿಕ್ಕಿ ಬಿಕ್ಕಿ ಅತ್ತ SP ನಾಯಕ: ವಿಡಿಯೋ ವೈರಲ್

ಗಾಂಧಿ ಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಯ್ತು. ಸಾಮಾಜಿಕ ಜಾಲತಾಣದಲ್ಲಿ ಅನೇಕ ನಾಯಕರು, ಗಾಂಧಿ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳ ಫೋಟೋ ಹಾಗೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಹೆಚ್ಚು ವೈರಲ್ ಆಗಿದೆ.

’ನಾಟ್‌ ಔಟ್‌’ ಎಂದ ಥರ್ಡ್‌ ಅಂಪೈರ್‌ ವಿರುದ್ಧ ಮುಗಿಬಿದ್ದ ಗೌತಮ್‌ ಗಂಭೀರ್‌

ಈ ವಿಡಿಯೋ ಸಮಾಜವಾದಿ ಪಕ್ಷದ ನಾಯಕ ಗಾಲಿಬ್ ಖಾನ್ ಅವರದ್ದು. ಅವರು ಇಂದು ಬೆಂಬಲಿಗರ ಜೊತೆ ಗಾಂಧಿ ಜಯಂತಿ ಆಚರಿಸಿದ್ರು. ಗಾಂಧಿ ಪ್ರತಿಮೆ ಬಳಿ ಅವರು ಭಾವುಕರಾದ್ರು.

ಗಾಲಿಬ್ ಖಾನ್, ತಮ್ಮ ಬೆಂಬಲಿಗರೊಂದಿಗೆ ಮಹಾತ್ಮ ಗಾಂಧಿಯವರ ಪ್ರತಿಮೆ ಬಳಿ ಬಂದಿದ್ದರು. ಗಾಂಧೀಜಿ ಪ್ರತಿಮೆಯನ್ನು ಹಿಡಿದು ಅವರು ಬಾಪು-ಬಾಪು ಎಂದು ಭಾವುಕರಾದ್ರು. ಅವರ ಬೆಂಬಲಿಗರು, ಅವರಿಗೆ ಸಮಾಧಾನ ಹೇಳುವ ಪ್ರಯತ್ನ ಮಾಡಿದ್ರು. ಕೆಲವೇ ಕ್ಷಣಗಳಲ್ಲಿ ಗಾಲಿಬ್ ಖಾನ್ ಅವರ ಈ ವಿಡಿಯೋ ವೈರಲ್ ಆಗಿದೆ. ಜನರು ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಮಾಡಿದ್ದಾರೆ.

ವಾಹನ ಸವಾರರಿಗೆ ಮಹತ್ವದ ಸುದ್ದಿ..! ಈ ದಿನಾಂಕದವರೆಗೆ ಮಾತ್ರ ಮಾನ್ಯವಾಗಲಿದೆ ದಾಖಲೆ

ಗಾಲಿಬ್ ಖಾನ್, ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಗಾಂಧಿ ಪ್ರತಿಮೆ ಬಳಿ ಭಾವುಕರಾಗಿದ್ದಾರೆ. ಗಾಲಿಬ್ ಖಾನ್ ವಿಡಿಯೋಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಅತಿಯಾಗಿ ಆಡುವುದು ಇಡೀ ಆಟವನ್ನು ಹಾಳು ಮಾಡುತ್ತದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಬಾಪು ತನ್ನ ಮಗುವನ್ನು ಏಕೆ ಬಿಟ್ಟು ಹೋದರು…. ವಿಡಿಯೋವನ್ನು ಆಸ್ಕರ್‌ಗೆ ಕಳುಹಿಸಬೇಕು’ ಎಂದು ಮತ್ತೊಬ್ಬರು ಬರೆದಿದ್ದಾರೆ. ಇನ್ನೊಬ್ಬರು, ಅತಿಯಾಗಿ ನಟನೆ ಮಾಡಿದ್ದಕ್ಕೆ ಗಾಲಿಬ್ ಖಾನ್ ಗೆ 50 ರೂಪಾಯಿ ಕಟ್ ಎಂದು ಇನ್ನೊಬ್ಬರು ಬರೆದಿದ್ದಾರೆ.

2019 ರಲ್ಲಿ ಗಾಂಧಿ ಜಯಂತಿಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಫಿರೋಜ್ ಖಾನ್ ವಿಡಿಯೋ ವೈರಲ್ ಆಗಿತ್ತು. ಅವರು ಗಾಂಧಿಜೀಯವರನ್ನು ನೆನೆದು ಅಳುತ್ತಿರುವ ವಿಡಿಯೋ ಚರ್ಚೆಗೆ ಕಾರಣವಾಗಿತ್ತು. ಈ ವೇಳೆ ಫಿರೋಜ್ ಖಾನ್, ಬಾಪು ನೀವು ಎಲ್ಲಿಗೆ ಹೋಗಿದ್ದೀರಿ. ನೀವು ಇಷ್ಟು ದೊಡ್ಡ ದೇಶವನ್ನು ಉದ್ಧಾರ ಮಾಡಿ ನಮ್ಮನ್ನು ಅನಾಥರನ್ನಾಗಿ ಮಾಡಿ ಹೋಗಿದ್ದೀರೆಂದು ಅತ್ತಿದ್ದರು.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...