alex Certify ‘ದಾದಾ’ ಜನ್ಮದಿನಕ್ಕೆ ವಿಶೇಷ ಉಡುಗೊರೆ ಹೊತ್ತು ತಂದ ಅಭಿಮಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದಾದಾ’ ಜನ್ಮದಿನಕ್ಕೆ ವಿಶೇಷ ಉಡುಗೊರೆ ಹೊತ್ತು ತಂದ ಅಭಿಮಾನಿ..!

ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಗುರುವಾರ ಕೊಲ್ಕತ್ತಾದ ಬೆಹಾಲಾದಲ್ಲಿರುವ ತಮ್ಮ ನಿವಾಸದಲ್ಲಿ 49ನೇ ವರ್ಷದ ಜನ್ಮ ದಿನಾಚರಣೆಯನ್ನ ಆಚರಿಸಿಕೊಂಡಿದ್ದಾರೆ.

ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್​ ಗಂಗೂಲಿ ಈ ವರ್ಷ 2 ಬಾರಿ ಆಸ್ಪತ್ರೆಗೆ ದಾಖಲಾದ ಕಾರಣದಿಂದಾಗಿ ಅತ್ಯಂತ ಸರಳವಾಗಿ ಜನ್ಮ ದಿನ ಆಚರಿಸಿದ್ದಾರೆ.

ದಾದಾ ಸರಳ ಜನ್ಮ ದಿನಾಚರಣೆ ನಡುವೆಯೂ ಅಭಿಮಾನಿಗಳು ನೆಚ್ಚಿನ ಆಟಗಾರನ ಜನ್ಮದಿನವನ್ನ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ದಾದಾ ಅಭಿಮಾನಿಗಳಲ್ಲಿ ಒಬ್ಬರಾದ ಪಶ್ಚಿಮ ಬಂಗಾಳದ ನಬದ್ವೀಪ್​ ನಿವಾಸಿ, ಚೈತನ್ಯ ಮೂರ್ತಿಯನ್ನ ಉಡುಗೊರೆಯಾಗಿ ನೀಡಿದ್ದಾರೆ.

ಮುಂಜಾನೆಯೇ ಬೆಹಾಲಾದಲ್ಲಿರುವ ಗಂಗೂಲಿ ನಿವಾಸಕ್ಕೆ ಮುಂಜಾನೆಯೇ ತೆರಳಿದ ಅಶೋಕ್, ದಾದಾಗಾಗಿ ಈ ಸುಂದರ ಮೂರ್ತಿಯನ್ನ ತಂದಿದ್ದರು. ಇದು ಮಾತ್ರವಲ್ಲದೇ ಇನ್ನೂ ಅನೇಕರು ಗಂಗೂಲಿ ಚಿತ್ರಕಲಾಕೃತಿ ಸೇರಿದಂತೆ ಅನೇಕ ಉಡುಗೊರೆಗಳನ್ನ ತಂದಿದ್ದರು. ದಾದಾ ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿ ಈ ಮೂರ್ತಿಯನ್ನ ತಂದಿದ್ದಾಗಿ ಅಶೋಕ್​ ಹೇಳಿದ್ದಾರೆ.

ಡಯಟ್​ ನಿರ್ಬಂಧದ ಹಿನ್ನೆಲೆ ಗಂಗೂಲಿಗೆ ಜನ್ಮದಿನದಂದು ತಮ್ಮಿಷ್ಟದ ಬಿರಿಯಾನಿ ಸವಿಯಲು ಸಾಧ್ಯವಾಗಿಲ್ಲ. ಗಂಗೂಲಿ ಪುತ್ರಿ ತಮ್ಮ ತಂದೆಯ ಜನ್ಮದಿನಕ್ಕೆ 2 ವಿಶೇಷ ಕೇಕ್​ ತರಿಸಿದ್ದರು. ಪತ್ನಿ ಡೋನಾ ಪತಿಗೆ ಮೊಬೈಲ್​ ಫೋನ್​ ಉಡುಗೊರೆಯಾಗಿ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...