ರಾಷ್ಟ್ರೀಯ ಷೇರು ಮಾರುಕಟ್ಟೆಯ (ಎನ್‌ಎಸ್‌ಇ) ಅಂತಾರಾಷ್ಟ್ರೀಯ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಅಮೆರಿಕನ್ ಕಂಪನಿಗಳಾದ ಅಮೇಜ಼ಾನ್, ಗೂಗಲ್, ಮೈಕ್ರೋಸಾಫ್ಟ್‌ಗಳಂಥ ಕಂಪನಿಗಳ
ಷೇರುಗಳನ್ನು ಭಾರತೀಯ ಹೂಡಿಕೆದಾರರು ಖರೀದಿ ಮಾಡಬಹುದಾದ ಸಮಯ ಬರುತ್ತಿದೆ.
ಗುಜರಾತ್‌ನ ಅಹಮದಾಬಾದ್ ಬಳಿ ಇರುವ ಎನ್‌ಎಸ್‌ಇನ ಗಿಫ್ಟ್ ನಗರದ ಶಾಖೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಅಮೆರಿಕದ ಸ್ಟಾಕ್‌ಗಳು ಹಾಗೂ ಬ್ರೋಕರ್ ನೋಂದಣಿಗಳನ್ನು ಖರೀದಿ ಮಾಡಲು ಭಾರತೀಯ ಹೂಡಿಕೆದಾರರಿಗೆ ಅನುಕೂಲ ಮಾಡಲಾಗಿದೆ ಎಂದು ಎನ್‌ಎಸ್‌ಇ ತಿಳಿಸಿದೆ. ಈ ವ್ಯವಸ್ಥೆ ಮೂಲಕ ಗಿಫ್ಟ್ ಸಿಟಿಯಲ್ಲಿರುವ ಬ್ರೋಕರ್‌ಗಳೊಂದಿಗೆ ಡಿಮ್ಯಾಟ್ ಖಾತೆಗಳನ್ನು ಹೂಡಿಕೆದಾರರು ತೆರೆದು ಆ ಮೂಲಕ ಅಮೆರಿಕನ್ ಸ್ಟಾಕ್‌ಗಳ ಭಾಗಶಃ ಮಾಲೀಕತ್ವ ಪಡೆಯಬಹುದಾಗಿದೆ.
BIG NEWS: ಶಿಲ್ಪಾ ಶೆಟ್ಟಿಗೆ ಎದುರಾಯ್ತು ಮತ್ತೊಂದು ಸಂಕಷ್ಟ
ಇಡಿಯ ವಹಿವಾಟು, ಕ್ಲಿಯರಿಂಗ್, ಸೆಟ್ಲ್‌ಮೆಂಟ್ ಹಾಗೂ ಅಮೆರಿಕನ್ ಸ್ಟಾಕ್‌ಗಳ ಮಾಲೀಕ್ವವನ್ನು ಅಂತಾರಾಷ್ಟ್ರೀಯ ಆರ್ಥಿಕ ಸೇವೆಗಳ ಕೇಂದ್ರದ (ಐಎಫ್‌ಎಸ್‌ಸಿ) ಮೇಲುಸ್ತುವಾರಿಯಲ್ಲಿ ನಡೆಯಲಿವೆ.
ಆರ್‌ಬಿಐನ ಲಿಬರಲೈಸ್ಟ್ ರೆಮಿಟೆನ್ಸ್ ಸ್ಕೀಂ (ಎಲ್‌ಎಸ್‌ಆರ್) ಮುಖಾಂತರ ಭಾರತೀಯರು ವಾರ್ಷಿಕ $250,000ಗಳವರೆಗೂ ಅಮೆರಿಕದ ಸ್ಟಾಕ್‌ಗಳ ಮೇಲೆ ಹೂಡಿಕೆ ಮಾಡಬಹುದಾಗಿದೆ.