alex Certify Watch Video | ಬೀದಿ ಬದಿ ವ್ಯಾಪಾರಿಗೆ ಹೆಣ್ಣು ಹುಡುಕಲು ಮುಂದಾದ ಸೋನು ಸೂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Video | ಬೀದಿ ಬದಿ ವ್ಯಾಪಾರಿಗೆ ಹೆಣ್ಣು ಹುಡುಕಲು ಮುಂದಾದ ಸೋನು ಸೂದ್

ಕಷ್ಟದಲ್ಲಿರುವ ಮಂದಿಯ ನೆರವಿಗೆ ಧಾವಿಸುವ ಮೂಲಕ ಸುದ್ದಿ ಮಾಡುವ ಬಹುಭಾಷಾ ನಟ ಸೋನು ಸೂದ್‌ ಬಳಿ ಅನೇಕ ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಬರುತ್ತಾರೆ.

ಹಿಮಾಚಲ ಪ್ರದೇಶ ಪ್ರವಾಸದಲ್ಲಿದ್ದ ವೇಳೆ ಅಲ್ಲಿ ಹುರಿದ ಜೋಳ ಮಾರುವ ವ್ಯಕ್ತಿಯೊಬ್ಬರೊಂದಿಗೆ ಸಂವಾದ ನಡೆಸಿದ ವಿಚಾರವನ್ನು ಸೋನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಉತ್ತರ ಪ್ರದೇಶದಿಂದ ಅಷ್ಟು ದೂರದ ಊರಿಗೆ ಹೋಗಿ ಜೋಳ ಮಾರುತ್ತಾ ಜೀವನ ಕಟ್ಟಿಕೊಳ್ಳುವ ಈ ಶ್ರಮ ಜೀವಿಯನ್ನು ತಮ್ಮದೇ ಶೈಲಿಯಲ್ಲಿ ಪರಿಚಯಿಸಿದ ಸೋನು ಸೂದ್, ಆತನಿಗೆ ಒಬ್ಬ ಹುಡುಗಿಯನ್ನು ಹುಡುಕಲು ನೆರವಾಗಲು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜೋಳದ ವ್ಯಾಪಾರಿಯ ಜೀವನದ ಪರಿಚಯ ಮಾಡಿಕೊಡುವ ಸೋನು, ಆತನೊಂದಿಗೆ ವಿನಮ್ರದಿಂದ ನಡೆದುಕೊಂಡು, ಕಾಳಜಿ ತೋರಿ ಮಾತನಾಡಿದ ಬಗೆಯನ್ನು ನೆಟ್ಟಿಗರು ಮೆಚ್ಚಿ ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...