alex Certify ಸೋನು ಸೂದ್ ​ರನ್ನ ಭೇಟಿಯಾಗಲು 700 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿ ಬಂದ ಅಭಿಮಾನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನು ಸೂದ್ ​ರನ್ನ ಭೇಟಿಯಾಗಲು 700 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿ ಬಂದ ಅಭಿಮಾನಿ..!

ಬಾಲಿವುಡ್​ ನಟ ಸೋನು ಸೂದ್​ ನಟನೆಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಬಡ ಜನರ ಪರವಾಗಿ ನಿಂತಿರುವ ಸೂನ್​ ಸೂದ್​ರನ್ನ ಭೇಟಿಯಾಗಬೇಕು ಅಂತಾ ವೆಂಕಟೇಶ್​ ಎಂಬಾತ ಹೈದರಾಬಾದ್​ನಿಂದ ಮುಂಬೈವರೆಗೆ ಕಾಲ್ನಡಿಗೆಯಲ್ಲೇ ಸಾಗಿ ಬಂದಿದ್ದಾನೆ.

ಟ್ವಿಟರ್​ನಲ್ಲಿ ಅಭಿಮಾನಿಯನ್ನ ಭೇಟಿಯಾದ ಫೋಟೋ ಶೇರ್​ ಮಾಡಿರುವ ಸೋನು ಸೂದ್,​ ಅಭಿಮಾನಿಗಳ ಬಳಿ ನನ್ನ ಭೇಟಿಯಾಗಲು ಈ ರೀತಿಯ ಕಷ್ಟವನ್ನ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ಟ್ವಿಟರ್​ನಲ್ಲಿ ಫೋಟೋ ಶೇರ್​ ಮಾಡಿರುವ ಸೋನು ಸೂದ್​, ವೆಂಕಟೇಶ್​ ನನ್ನನ್ನ ಭೇಟಿಯಾಗುವ ಸಲುವಾಗಿ ಹೈದರಾಬಾದ್​ನಿಂದ ಮುಂಬೈವರೆಗೆ ಬರಿಗಾಲಿನಲ್ಲೇ ನಡೆದು ಬಂದಿದ್ದಾರೆ. ಇವರು ನಿಜಕ್ಕೂ ಸ್ಪೂರ್ತಿದಾಯಕ . ಆದರೂ ಈ ರೀತಿಯ ಕಷ್ಟ ತೆಗೆದುಕೊಳ್ಳಬೇಡಿ ಎಂದು ಬರೆದುಕೊಂಡಿದ್ದಾರೆ.

ಕೋವಿಡ್​ 19 ಸಂದರ್ಭದಲ್ಲಿ ಸೋನು ಸೂದ್​ ವಲಸೆ ಕಾರ್ಮಿಕರು ಹಾಗೂ ಕೊರೊನಾದಿಂದಾಗಿ ಚಿಕಿತ್ಸೆಗಾಗಿ ಪರದಾಡುತ್ತಿರುವವರ ಪಾಲಿಗೆ ದೇವರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನ ಸೋನು ಸೂದ್​​​ ತಮ್ಮ ಮಾನವೀಯ ಕಾರ್ಯದ ಮೂಲಕವೇ ಗಳಿಸಿದ್ದಾರೆ.

— sonu sood (@SonuSood) June 10, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...