alex Certify ಮಾನ್ಸೂನ್​ ಅಧಿವೇಶನಕ್ಕೂ ಮುನ್ನಾ ದಿನ ಸಂಸದರ ಸಭೆ ಕರೆದ ಸೋನಿಯಾ ಗಾಂಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನ್ಸೂನ್​ ಅಧಿವೇಶನಕ್ಕೂ ಮುನ್ನಾ ದಿನ ಸಂಸದರ ಸಭೆ ಕರೆದ ಸೋನಿಯಾ ಗಾಂಧಿ

ಮಾನ್ಸೂನ್​ ಅಧಿವೇಶನ ಹಿನ್ನೆಲೆಯಲ್ಲಿ ನಾಳೆ ಸಂಜೆ 6 ಗಂಟೆ ಸುಮಾರಿಗೆ ಕಾಂಗ್ರೆಸ್​ ಪಕ್ಷದ ಎಲ್ಲಾ ಲೋಕಸಭಾ ಸದಸ್ಯರು ಸೋನಿಯಾಗಾಂಧಿಯನ್ನ ಭೇಟಿಯಾಗಲಿದ್ದಾರೆ.

ಸೋಮವಾರದಿಂದ ಆರಂಭವಾಗಲಿರುವ ಮಾನ್ಸೂನ್​ ಅಧಿವೇಶನದಲ್ಲಿ ಯಾವುದೆಲ್ಲ ವಿಚಾರಗಳ ಬಗ್ಗೆ ಗಮನ ಸೆಳೆಯಬೇಕು ಅನ್ನೋದ್ರ ಬಗ್ಗೆ ಸಂಸದರು ಚರ್ಚೆ ನಡೆಸುವ ಸಾಧ್ಯತೆ ಇದೆ.

ಈ ಸಭೆಯ ನೇತೃತ್ವವನ್ನ ಸೋನಿಯಾ ಗಾಂಧಿ ವಹಿಸಲಿದ್ದು ಸಂಸದರಿಗೆ ಕೆಲ ಮುಖ್ಯ ಸಲಹೆಗಳನ್ನ ನೀಡಲಿದ್ದಾರೆ ಎನ್ನಲಾಗಿದೆ.

ಈ ಬಾರಿಯ ಮಾನ್ಸೂನ್​ ಅಧಿವೇಶನದಲ್ಲಿ ಮೋದಿ ಸರ್ಕಾರ ಜನಸಂಖ್ಯೆ ನಿಯಂತ್ರಣ ಹಾಗೂ ಏಕರೂಪ ನಾಗರಿಕ ಸಂಹಿತೆ ಖಾಸಗಿ ಸದಸ್ಯರ ಮಸೂದೆಯನ್ನ ಪರಿಚಯಿಸಲಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...