alex Certify ಕರಾವಳಿ ಕಾವಲು ಪಡೆಗೆ ಸಿಕ್ಕಿಬಿದ್ದವನ ಹಿನ್ನಲೆ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರಾವಳಿ ಕಾವಲು ಪಡೆಗೆ ಸಿಕ್ಕಿಬಿದ್ದವನ ಹಿನ್ನಲೆ ಬಹಿರಂಗ

ಡಿಸೆಂಬರ್ 19ರಂದು ಗುಜರಾತ್ ನ ಕರಾವಳಿಯಲ್ಲಿ ಆರು ಜನ‌ ಮೀನುಗಾರರನ್ನ ಕರಾವಳಿ ಕಾವಲುಗಾರರು ಬಂಧಿಸಿದ್ದರು. ಸಧ್ಯ ಆ ಆರು ಜನರು ಯಾರೆಂದು ತಿಳಿದು ಬಂದಿದ್ದು, ಬಂಧಿತರಾದವರಲ್ಲಿ ಒಬ್ಬ ಪಕ್ಕದ ಪಾಕಿಸ್ತಾನದ ಪ್ರಭಾವಿ ಡ್ರಗ್ ಲಾರ್ಡ್ ನ ಮಗ ಎಂದು ಪತ್ತೆಯಾಗಿದೆ.

BIG BREAKING: ರೈತ ಸಂಘಟನೆಗಳಿಂದ ಮಹತ್ವದ ನಿರ್ಧಾರ, ಪಂಜಾಬ್ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ

ಪಾಕಿಸ್ತಾನದ ಅಲ್ ಹ್ಯುಸೇನಿ ಹಡಗಿನಲ್ಲಿ 400 ಕೋಟಿ ಮೌಲ್ಯದ 77 ಕೆ.ಜಿ. ಹೆರಾಯಿನ್ ಸ್ಮಗಲ್ ಮಾಡಲಾಗ್ತಿತ್ತು. ಆರು ಜನರನ್ನ ವಶಕ್ಕೆ ಪಡೆದು ಅವರ ಐಡಿಗಳನ್ನ ಚೆಕ್ ಮಾಡಿದಾಗ, ಆ ಆರು ಜನರಲ್ಲಿ ಪಾಕಿಸ್ತಾನದ ಕರಾಚಿಯ ಅತಿದೊಡ್ಡ ಡ್ರಗ್ ಲಾರ್ಡ್ ಹಜಿ ಹಸನ್ ನ ಮಗ ಸಾಜಿದ್ ಸಹ ಇದ್ದಾನೆ ಎಂದು ತಿಳಿದುಬಂದಿದೆ‌. ಸ್ವತಃ ಹಜಿ ಹಸನ್ ಮಗ, ಅದು ಭಾರತಕ್ಕೆ ಡ್ರಗ್ಸ್ ಸ್ಮಗಲ್ ಮಾಡ್ತಿರೋದಾದ್ರು ಯಾಕೆ ಎಂಬ ತನಿಖೆ ಮುಂದುವರೆದಿದೆ. ಇನ್ನು ಉನ್ನತ ಮೂಲಗಳ ಮಾಹಿತಿ ಪ್ರಕಾರ ಈ ಡ್ರಗ್ಸ್ ಅನ್ನು ಪಂಜಾಬ್ ಗೆ ಸ್ಮಗಲ್ ಮಾಡಲಾಗ್ತಿತ್ತು.

ಇತ್ತೀಚೆಗೆ ಡ್ರಗ್ಸ್ ಯಥೇಚ್ಛವಾಗಿ ಭಾರತಕ್ಕೆ ಬರುತ್ತಿರುವುದಕ್ಕೆ ಕಾರಣ ಹುಡುಕುತ್ತಾ ಹೋದರೆ ತಾಲಿಬಾನ್ ಎಂಬ ಉತ್ತರ ಸಿಗುತ್ತದೆ. ಅಫ್ಘಾನಿಸ್ತಾನದಲ್ಲಿ ಸಧ್ಯಕ್ಕೆ ಆ್ಯಕ್ಟೀವ್ ಆಗಿರುವ ಡ್ರಗ್ಸ್ ಲಾರ್ಡ್ ಗಳಿಗೆ ನಮ್ಮ ಮೇಲೂ ತಾಲಿಬಾನಿಗಳು ಅಧಿಕಾರ ಚಲಾಯಿಸಿ ಈ ಮಾರ್ಕೆಟನ್ನು ಅವರ ವಶಕ್ಕೆ ಪಡೆಯಬಹುದು ಎಂಬ ಭಯವಿದೆ, ಹಾಗಾಗಿ ಆದಷ್ಟು ಬೇಗ ತಮ್ಮ ಬಳಿಯಿರುವ ಸ್ಟಾಕ್ ಅನ್ನು ಖಾಲಿ ಮಾಡುತ್ತಿದ್ದಾರೆ. ಆದರೆ ಭಾರತೀಯ ಅಧಿಕಾರಿಗಳು ಇವರ ಯೋಜನೆಯನ್ನ ತಲೆಕೆಳಗಾಗಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...