alex Certify GOOD NEWS: ಈ ಯೋಜನೆ ಮೂಲಕ ಪಡೆಯಬಹುದು 20 ವರ್ಷಗಳ ಕಾಲ ಉಚಿತ ವಿದ್ಯುತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಈ ಯೋಜನೆ ಮೂಲಕ ಪಡೆಯಬಹುದು 20 ವರ್ಷಗಳ ಕಾಲ ಉಚಿತ ವಿದ್ಯುತ್

ದಿನೇ ದಿನೇ ಇಂಧನದ ಬೆಲೆಗಳು ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ವಿದ್ಯುತ್‌ ಬಳಕೆಯಲ್ಲಿ ಹೆಚ್ಚಳವಾಗುತ್ತಿರುವ ನಡುವೆಯೇ ಬೆಲೆಗಳೂ ಏರಿವೆ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಮನೆಗಳ ಛಾವಣಿ ಮೇಲೆ ಸೋಲಾರ್‌ ಪ್ಯಾನೆ‌ಲ್‌ಗಳ ಅಳವಡಿಕೆಯಿಂದ ಉಚಿತ ವಿದ್ಯುತ್‌ ಪಡೆಯಬಹುದಾಗಿದೆ.

ಸೋಲಾರ್‌ ಫಲಕಗಳ ಅಳವಡಿಕೆಗೆ ಸರ್ಕಾರ ಸಹ ನೆರವಾಗಲಿದೆ. ಭಾರತ ಸರ್ಕಾರವು ಸೋಲಾರ್‌ ಮೇಲ್ಛಾವಣಿ ಸಬ್ಸಿಡಿ ಯೋಜನೆ ನಡೆಸುತ್ತಿದ್ದು, ನವೀಕರಿಸಬಲ್ಲ ಇಂಧನ ಬಳಕೆಗೆ ಉತ್ತೇಜನ ನೀಡುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ನವೀಕರಿಸಬಲ್ಲ ಇಂಧನ ಸಚಿವಾಲಯವು ಮೇಲ್ಚಾವಣಿಗಳ ಮೇಲೆ ಸೋಲಾರ್‌ ಫಲಕಗಳನ್ನು ಅಳವಡಿಸುವ ಮಂದಿಗೆ ಸಬ್ಸಿಡಿ ನೀಡಲಿದೆ.

ಪ್ರತಿದಿನ ಈ ಸಲಾಡ್ ತಿನ್ನುವುದರಿಂದ ಬೇಗ ಕರಗುತ್ತೆ ಬೊಜ್ಜು

ಹೀಗೆ ಮಾಡುವುದರಿಂದ ನಿಮ್ಮ ವಿದ್ಯುತ್‌ ಬಿಲ್‌ನಲ್ಲಿ 30-50%ನಷ್ಟು ಉಳಿತಾಯ ಮಾಡಬಹುದಾಗಿದೆ. ಸೋಲಾರ್‌ ಫಲಕಗಳು 25 ವರ್ಷಗಳ ಮಟ್ಟಿಗೆ ವಿದ್ಯುತ್‌ ನೀಡಲಿವೆ. ಈ ಸಬ್ಸಿಡಿ ಯೋಜನೆಯಲ್ಲಿ ಸೌರಫಲಕಗಳ ಅಳವಡಿಕೆಗೆ ತಗುಲುವ ವೆಚ್ಚವನ್ನು 5-6 ವರ್ಷಗಳಲ್ಲಿ ಹಿಂಪಡೆಯಬಹುದು. ಇದಾದ ಬಳಿಕ ನಿಮಗೆ ಉಚಿತ ವಿದ್ಯುತ್‌ನ ಲಾಭವು ಮುಂದಿನ 19-20 ವರ್ಷಗಳವರೆಗೂ ಸಿಗಲಿದೆ.

ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೀಗೆ:

* solarrooftop.gov.in ಜಾಲತಾಣಕ್ಕೆ ಭೇಟಿ ನೀಡಿ.

* ಈಗ ಹೋಂ ಪೇಜ್‌ನಲ್ಲಿ ‘Apply for Solar Roofing’ ಮೇಲೆ ಕ್ಲಿಕ್ ಮಾಡಿ.

* ಮುಂದಿನ ಪುಟದಲ್ಲಿ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ.

ಈ ವಿಷ್ಯಕ್ಕೆ ತುಂಬಾ ಹೆದರ್ತಾರಂತೆ ದಪ್ಪಗಿನ ಮಹಿಳೆಯರು……!

* ಈಗ ನೀವು ಸೌರ ಮೇಲ್ಛಾವಣಿ ಅಪ್ಲಿಕೇಶನ್ ‌ಅನ್ನು ನಿಮ್ಮ ಸ್ಕ್ರೀನ್ ಮೇಲೆ ನೋಡುವಿರಿ.

* ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿ Submit ಕ್ಲಿಕ್ ಮಾಡಿ.

ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 1800-180-3333 ಟೋಲ್‌ ಫ್ರೀ ಸಂಖ್ಯೆಗೆ ಕರೆ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...