alex Certify ಆಸ್ಟ್ರೇಲಿಯಾ, ಇಂಡೋನೇಷ್ಯಾದಲ್ಲಿ ಕಾಣಿಸಿದ ಅಪರೂಪದ ‘ನಿಂಗಲೂ ಗ್ರಹಣ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಟ್ರೇಲಿಯಾ, ಇಂಡೋನೇಷ್ಯಾದಲ್ಲಿ ಕಾಣಿಸಿದ ಅಪರೂಪದ ‘ನಿಂಗಲೂ ಗ್ರಹಣ’

ಸೂರ್ಯ ಗ್ರಹಣವು ಆಗಸದಲ್ಲಿ ನಡೆಯುವ ಸೂರ್ಯ-ಚಂದ್ರರ ನಡುವಿನ ಕಣ್ಣಾ ಮುಚ್ಚಾಲೆಯ ಆಟ.

ಸೌರಮಂಡಲದಲ್ಲಿ ನಡೆಯುವ ಈ ಅದ್ಭುತ ಕ್ರಿಯೆಗೆ ಗ್ರಹಣ ಎಂದು ಹೇಳಲಾಗುತ್ತೆ. ಭೂಮಿ ಸೂರ್ಯನ ನಡುವೆ ಚಂದ್ರನು ಹಾದುಹೋಗುತ್ತಾನೆ. ಇದರಿಂದಾಗಿ ಸ್ವಲ್ಪ ಸಮಯ ಭೂಮಿಯಲ್ಲಿ ಸೂರ್ಯನ ಬೆಳಕು ಸಂಪೂರ್ಣವಾಗಿ ಅಥವಾ ಭಾಗಶಃ ಮರೆಯಾಗುತ್ತದೆ. ಆಗಲೇ ಭೂಮಿಯಲ್ಲಿ ಕೆಲಕ್ಷಣದವರೆಗೆ ಕತ್ತಲೆ ಆವರಿಸಿ ರಾತ್ರಿಯಾದಂತಿರುತ್ತೆ.

ಈಗ ಮತ್ತೊಂದು ಅಪರೂಪದ ಸೂರ್ಯಗ್ರಹಣ ಸಂಭವಿಸಿದ್ದು ಇದು ಹೈಬ್ರಿಡ್ ಸೂರ್ಯಗ್ರಹಣವಾಗಿದೆ. ಇದಕ್ಕೆ ‘ನಿಂಗಲೂ ಗ್ರಹಣ’ ಎಂದು ಹೆಸರಿಟ್ಟಿದ್ದು ಇದು ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಮಾತ್ರ ಇದೇ ಗುರುವಾರ ಕಾಣಿಸಿಕೊಂಡಿದೆ.

ವೃತ್ತಾಕಾರದ ಗ್ರಹಣದ ಸಮಯದಲ್ಲಿ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಲಿಲ್ಲ, ಬದಲಾಗಿ, ಸೂರ್ಯನ ಮೇಲೆ ಅತಿಕ್ರಮಿಸಲಾದ ಒಂದು ಸಣ್ಣ ಡಾರ್ಕ್ ಡಿಸ್ಕ್ ಆಗಿ ಗೋಚರಿಸಿತು. ಅದು ಬೆಂಕಿಯ ಉಂಗುರ ಆಕಾರದ್ದಾಗಿರುವುದು ವಿಶೇಷವಾಗಿತ್ತು.

ಎಕ್ಸ್‌ಮೌತ್, ಪಶ್ಚಿಮ ಆಸ್ಟ್ರೇಲಿಯಾದ ಸರ್ಕಾರದ ಪ್ರಕಾರ ಸಂಪೂರ್ಣ ಗ್ರಹಣವು ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯಲ್ಲಿರುವ ಒಂದು ಪಟ್ಟಣದಲ್ಲಿ ಮಾತ್ರ ಗೋಚರಿಸಿತು.

ಈ ಸೂರ್ಯ ಗ್ರಹಣವು ಸುಮಾರು ಮೂರು ಗಂಟೆಗಳ ಕಾಲ ಗೋಚರಿಸಿದ್ದು, ಭಾರತೀಯ ಕಾಲಮಾನ ಬೆಳಗಿನ 3.34 ರಿಂದ 6.32 ಸಮಯದಲ್ಲಿ. ಇನ್ನೂ ಸಂಪೂರ್ಣ ಗ್ರಹಣವು 4.29 ರಿಂದ 4.30 ವರೆಗೆ ಆಗಿದ್ದು ಇದು ಅತ್ಯಂತ ಕಡಿಮೆ ಅವಧಿಯವರೆಗೆ ಗೋಚರಿಸಿದ ಸೂರ್ಯಗ್ರಹಣವಾಗಿದೆ.

ಅಂತಾರಾಷ್ಟ್ರೀಯ ಜನಸಮೂಹ ಎಕ್ಸ್‌ಮೌತ್ ನಲ್ಲಿ ಜಮಾಯಿಸಿ ಟೆಂಟ್‌ಗಳು ಮತ್ತು ಟ್ರೇಲರ್‌ಗಳಲ್ಲಿ ಕ್ಯಾಂಪಿಂಗ್ ಮಾಡಿದ್ದರು, ಪಟ್ಟಣದ ಅಂಚಿನಲ್ಲಿ ಕ್ಯಾಮೆರಾಗಳು ಮತ್ತು ಇತರ ವೀಕ್ಷಣಾ ಸಾಧನಗಳ ಮೂಲಕ ಗ್ರಹಣ ವೀಕ್ಷಿಸಿದರು.

ಇನ್ನೂ ಇಂಡೋನೇಷ್ಯಾದ ರಾಜಧಾನಿಯಲ್ಲಿ, ಮೋಡಗಳು ಆವರಿಸಿದ್ದರಿಂದ ಈ ಸೂರ್ಯ ಗ್ರಹಣವನ್ನು ವೀಕ್ಷಿಸಲು ಜನರು ಜಕಾರ್ತಾ ತಾರಾಲಯಕ್ಕೆ ಬಂದಿದ್ದರು. ಅಷ್ಟಕ್ಕೂ ಭಾರತದಲ್ಲಿ ಗ್ರಹಣ ಗೋಚರವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...