alex Certify ಸೋ ಕೂಲ್: ಟೇಬಲ್ ಟೆನಿಸ್ ಬಾಲ್‌ನೊಂದಿಗೆ ಬೌಲಿಂಗ್ ಪಿನ್‌ಗಳನ್ನು ಬೀಳಿಸುವ ಚಾಕಚಕ್ಯತೆ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋ ಕೂಲ್: ಟೇಬಲ್ ಟೆನಿಸ್ ಬಾಲ್‌ನೊಂದಿಗೆ ಬೌಲಿಂಗ್ ಪಿನ್‌ಗಳನ್ನು ಬೀಳಿಸುವ ಚಾಕಚಕ್ಯತೆ !

ನಮ್ಮ ನಡುವೆ ಅಸಾಧಾರಣ ಪ್ರತಿಭೆಗಳ ‌ಸಂಖ್ಯೆಗೇನು ಕಡಿಮೆ ಇಲ್ಲ. ಅಲ್ಲಿ ವ್ಯಕ್ತಿಯೊಬ್ಬ ಟೇಬಲ್ ಟೆನ್ನಿಸ್ ಬಾಲ್‌ನಿಂದ ಬೌಲಿಂಗ್ ಪಿನ್‌ಗಳನ್ನು ಬಗೆ ಬಗೆಯಾಗಿ ಕೆಡವಿ ಗಮನ ಸೆಳೆಯುತ್ತಿದ್ದಾರೆ.

ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋ ಕ್ಲಿಪ್‌ನಲ್ಲಿ, ಪಿಂಗ್- ಪಾಂಗ್ ಟೇಬಲ್‌ನ ಒಂದು ಬದಿಯಲ್ಲಿ ಬೌಲಿಂಗ್ ಪಿನ್‌ಗಳ ಸೆಟ್ ಅನ್ನು ಒಟ್ಟಿಗೆ ಜೋಡಿಸಿರುವುದನ್ನು ಕಾಣಬಹುದು. ಆ ವ್ಯಕ್ತಿಯು ಟೇಬಲ್ ಟೆನಿಸ್ ಬಾಲ್‌ನಲ್ಲಿ ಎಲ್ಲಾ ಪಿನ್‌ಗಳನ್ನು ಹೊಡೆದುರುಳಿಸುವ ಮೂಲಕ ಪರ್ಫೆಕ್ಟ್ ಸ್ಟ್ರೈಕ್ ತೋರಿಸುತ್ತಾನೆ‌.

“ಸೋ ಕೂಲ್…ಟೇಬಲ್ ಟೆನಿಸ್,” ಎಂದು ಹರ್ಷ್ ಶಿರ್ಷಿಕೆ ನೀಡಿದ್ದಾರೆ. ಆ ವ್ಯಕ್ತಿ ಮುಂದಿನ ಪ್ರಯತ್ನದಲ್ಲಿ, ಮೂರು ಪಿನ್‌ಗಳನ್ನು ಒಂದಕ್ಕೊಂದು ಸ್ವಲ್ಪ ದೂರದಲ್ಲಿ ಇರಿಸುತ್ತಾನೆ ಮತ್ತು ಒಂದೇ ಬಾಲ್ ಹೊಡೆತದಿಂದ ಎಲ್ಲವನ್ನೂ ಕೆಡವುತ್ತಾನೆ. ಈ ಮೂಲಕ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದನ್ನು ಮುಂದುವರೆಸುತ್ತಾ ಒಂದೇ ಸಮಯದಲ್ಲಿ ಮೂರು ಬಾಲ್‌ಗಳನ್ನು ಒಟ್ಟಿಗೆ ಹೊಡೆದು ಪಿನ್‌ಗಳನ್ನು ಕೆಳಗೆ ಬೀಳಿಸುತ್ತಾನೆ.

ಈ ವೀಡಿಯೊ ಟ್ವಿಟರ್‌ನಲ್ಲಿ 1.44 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು ನೆಟ್ಟಿಗರನ್ನು ವಿಸ್ಮಯಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...