alex Certify ದೀಪಾವಳಿ ಸಂಬಂಧಿತ ಅವಘಡಗಳಲ್ಲಿ 6 ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿ ಸಂಬಂಧಿತ ಅವಘಡಗಳಲ್ಲಿ 6 ಜನ ಸಾವು

ವಿಜಯವಾಡ: ಕೋವಿಡ್ ನಿರ್ಬಂಧಗಳಿಂದಾಗಿ ಎರಡು ವರ್ಷಗಳ ನಂತರ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಆಂಧ್ರಪ್ರದೇಶದಲ್ಲಿ ಆಚರಣೆಯ ವೇಳೆ ಸಂಭವಿಸಿದ ದುರ್ಘಟನೆಗಳಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ.

ಮಚಲಿಪಟ್ಟಣಂನಲ್ಲಿ ಪಟಾಕಿ ಸಿಡಿಸುವ ವೇಳೆ ಬಾಲಕನೊಬ್ಬ ಮೃತಪಟ್ಟಿದ್ದಾನೆ. ದೀಪಾವಳಿ ದಿನದಂದು ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ವಿಜಯವಾಡದಲ್ಲಿ ಪಟಾಕಿ ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಶನಿವಾರ ಇಬ್ಬರು ಸಾವನ್ನಪ್ಪಿದ್ದಾರೆ. ರಾಜಮಂಡ್ರಿಯಲ್ಲಿ ಮತ್ತೊಂದು ಸಾವು ವರದಿಯಾಗಿದೆ.

ಫಕೀರಗುಡೆಂನಲ್ಲಿ 15 ಮನೆಗಳು ಮತ್ತು ವಿಜಯವಾಡದ ಗವರ್ನರ್‌ ಪೇಟ್‌ನಲ್ಲಿ ಮೂರು ಪೆಟ್ಟಿಗೆ ಅಂಗಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. 11 ವರ್ಷದ ನರಸಿಂಹ ರಾವ್ ಮಚಲಿಪಟ್ಟಣದಲ್ಲಿ ಪಟಾಕಿ ಸಿಡಿಸುವಾಗ ಗಂಭೀರವಾಗಿ ಗಾಯಗೊಂಡಿದ್ದು, ಗುಂಟೂರು ಆಸ್ಪತ್ರೆಗೆ ಸ್ಥಳಾಂತರಿಸುವಾಗ ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾನೆ.

ಕಾಕಿನಾಡ ಜಿಲ್ಲೆಯ ಪದ್ಮನಾಭಂ ಕಾಲೋನಿಯಲ್ಲಿ ಹುಲ್ಲಿನ ಮನೆಗಳಿಗೆ ಬೆಂಕಿ ತಗುಲಿದೆ. ಪೂರ್ವ ಗೋದಾವರಿ ಜಿಲ್ಲೆಯ ಅನಪರ್ತಿ ಮಂಡಲದ ಪುಲಗರ್ತ ಗ್ರಾಮದಲ್ಲಿ ಪಟಾಕಿ ತಯಾರಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ಐವರು ಗಾಯಗೊಂಡಿದ್ದು, ಅವರನ್ನು ರಾಮಚಂದ್ರಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಲ್ನಾಡು ಜಿಲ್ಲೆಯ ನರಸರಾವ್‌ ಪೇಟೆಯ ಮಾರ್ಕೆಟ್‌ ಸೆಂಟರ್‌ನಲ್ಲಿ ಬೆಂಕಿ ಅವಘಡದಲ್ಲಿ 10 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಅನಂತಪುರ ಜಿಲ್ಲೆಯ ಪಮಿಡಿ ಪಟ್ಟಣದಲ್ಲಿ ಬೈಕ್ ಮೆಕ್ಯಾನಿಕ್ ಅಂಗಡಿಗೆ ಬೆಂಕಿ ತಗುಲಿ ಎರಡು ಡಜನ್ ಬೈಕ್‌ ಗಳು ಮತ್ತು ಬಿಡಿ ಭಾಗಗಳು ಸುಟ್ಟು ಭಸ್ಮವಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...