alex Certify ತೆಲಂಗಾಣ, ಛತ್ತೀಸ್ ಗಢ ಪೊಲೀಸರ ಕಾರ್ಯಾಚರಣೆ; ಎನ್ ಕೌಂಟರ್ ನಲ್ಲಿ 6 ನಕ್ಸಲರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಲಂಗಾಣ, ಛತ್ತೀಸ್ ಗಢ ಪೊಲೀಸರ ಕಾರ್ಯಾಚರಣೆ; ಎನ್ ಕೌಂಟರ್ ನಲ್ಲಿ 6 ನಕ್ಸಲರ ಹತ್ಯೆ

ಛತ್ತೀಸ್ ಗಢದ ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಸಿಆರ್ಪಿಎಫ್ ಯೋಧರಿಂದ ನಡೆದ ಕಾರ್ಯಾಚರಣೆಯಲ್ಲಿ 6 ಜನ ನಕ್ಸಲರು ಹತರಾಗಿದ್ದಾರೆ.

ಛತ್ತೀಸ್ ಗಢ, ತೆಲಂಗಾಣ ಪೊಲೀಸರು ಹಾಗೂ ಸಿಆರ್ ಪಿಎಫ್ ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭದಲ್ಲಿ 6 ಜನ ನಕ್ಸಲರು ಹತರಾಗಿದ್ದಾರೆ ಎಂದು ಎಂದು ತೆಲಂಗಾಣದ ಭದ್ರಾದ್ರಿ ಕೊಥಗುಡೆಂ ಜಿಲ್ಲೆಯ ಜಿಲ್ಲಾ ವರಿಷ್ಠಾಧಿಕಾರಿ ಸುನಿಲ್ ದತ್ ಹೇಳಿದ್ದಾರೆ.

ಡ್ರಗ್ಸ್ ಕೂಪದಿಂದ ಮಗಳನ್ನು ರಕ್ಷಿಸಿ; ವಿಶ್ವ ಹಿಂದೂ ಪರಿಷತ್ ಗೆ ಪತ್ರ ಬರೆದ ಮಹಿಳೆ

ಈ ಕಾರ್ಯಾಚರಣೆ ಇಂದು ಬೆಳಿಗ್ಗೆಯೇ ನಡೆದಿದೆ. ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಐಇಡಿಗಳನ್ನು ಹೂತಿಡಲಾಗಿತ್ತು. ಇತ್ತೀಚೆಗೆ ನಕ್ಸಲ್ ವಿರೋಧಿ ಕಾರ್ಯಾಚರಣೆ ಹೆಚ್ಚಾಗಿದ್ದು, ಈ ರಾಜ್ಯಗಳಲ್ಲಿನ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...