alex Certify ಡ್ರಗ್ಸ್ ಕೂಪದಿಂದ ಮಗಳನ್ನು ರಕ್ಷಿಸಿ; ವಿಶ್ವ ಹಿಂದೂ ಪರಿಷತ್ ಗೆ ಪತ್ರ ಬರೆದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್ ಕೂಪದಿಂದ ಮಗಳನ್ನು ರಕ್ಷಿಸಿ; ವಿಶ್ವ ಹಿಂದೂ ಪರಿಷತ್ ಗೆ ಪತ್ರ ಬರೆದ ಮಹಿಳೆ

ಮಂಗಳೂರು: ಯುವಪೀಳಿಗೆಗೆ ಮಾರಕವಾದ ಡ್ರಗ್ಸ್ ಕೂಪದಿಂದ ತನ್ನ ಮಗಳನ್ನು ರಕ್ಷಿಸುವಂತೆ ಕ್ರೈಸ್ತ ಮಹಿಳೆಯೊಬ್ಬರು ವಿಶ್ವ ಹಿಂದೂ ಪರಿಷತ್ ಗೆ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರಿನ ಗ್ರೇಸಿ ಪಿಂಟೋ ಎಂಬ ಮಹಿಳೆ ತನ್ನ ಮಗಳನ್ನು ಮಾದಕ ದ್ರವ್ಯ ವ್ಯಸನದಿಂದ ಹೊರ ತರಲು ಸಹಾಯ ಮಾಡಿ ಎಂದು ವಿ ಹೆಚ್ ಪಿ ಮುಖಂಡರ ಮೊರೆ ಹೋಗಿದ್ದಾರೆ.

ಸುರತ್ಕಲ್ ನಿವಾಸಿ ಶರೀಫ್ ಸಿದ್ಧಕಿ ಎಂಬಾತನ ಡ್ರಗ್ಸ್ ದಂಧೆಯಲ್ಲಿ ನನ್ನ ಮಗಳು ಸಿಲುಕಿಕೊಂಡಿದ್ದಾಳೆ. ಕಳೆದ ಮೂರು ವರ್ಷಗಳಿಂದ ಡ್ರಗ್ಸ್ ಚಟಕ್ಕೆ ಬಿದ್ದಿದ್ದು, ಸಿದ್ಧಕಿ ಹಾಗೂ ಆತನ ಸ್ನೇಹಿತರು ತನ್ನ ಮಗಳಿಗೆ ಡ್ರಗ್ಸ್ ನೀಡಿ ಆಕೆಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಇದರಿಂದಾಗಿ ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದು ಅಸ್ವಸ್ಥಳಾಗಿದ್ದಾಳೆ. ಪೊಲೀಸ್ ಠಾಣೆಗೆ ದೂರು ನೀಡಿದರೂ, ಸಮುದಾಯದ ಮುಖಂಡರಿಗೆ ಹೇಳಿದರೂ ನ್ಯಾಯ ಸಿಕ್ಕಿಲ್ಲ. ಡ್ರಗ್ಸ್ ಜಾಲಕ್ಕೆ ಸಿಲುಕಿರುವ ತನ್ನ ಮಗಳನ್ನು ಸರಿಪಡಿಸಿ ತನಗೆ ಮರಳಿಸುವಂತೆ ಕೋರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...