alex Certify ನೋಡ ನೋಡುತ್ತಿದ್ದಂತೆಯೇ ಮೂರು ಕಾರುಗಳನ್ನ ನುಂಗಿ ಹಾಕಿದ ಸಿಂಕ್ ​ಹೋಲ್​..! ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡ ನೋಡುತ್ತಿದ್ದಂತೆಯೇ ಮೂರು ಕಾರುಗಳನ್ನ ನುಂಗಿ ಹಾಕಿದ ಸಿಂಕ್ ​ಹೋಲ್​..! ಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಕಾರುಗಳು ಪಾರ್ಕ್​ ಮಾಡಿದ್ದ ಜಾಗದಲ್ಲಿ ಉಂಟಾದ ಸಿಂಕ್​ಹೋಲ್​​ ಮೂರು ಕಾರುಗಳನ್ನ ನುಂಗಿ ಹಾಕಿದ ಆಘಾತಕಾರಿ ಘಟನೆ ಜೆರುಸಲೆಂನಲ್ಲಿ ನಡೆದಿದೆ.

ಜೆರುಸಲೆಂನ ಆಸ್ಪತ್ರೆಯೊಂದರ ಸಮೀಪದಲ್ಲಿ ಕಾರು ಪಾರ್ಕ್​ ಮಾಡಲಾಗಿದ್ದ ಜಾಗದಲ್ಲಿ ಮಧ್ಯಾಹ್ನದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಭಯಾನಕ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಗುತ್ತಿಗೆ ನೌಕರರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಶಾರಿ ಝೆಡೆಕ್​ ಮೆಡಿಕಲ್​ ಕೇಂದ್ರದ ಸಿಸಿ ಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಈ ಸಿಂಕ್​ಹೋಲ್​ ಗಾತ್ರ ದೊಡ್ಡದಾಗುತ್ತಲೇ ಇದೆ.

ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯ ಮುಂದುವರಿಸಿದೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಕೊರೊನಾ ಲಸಿಕೆ ಪಡೆಯುವವರಿಗೆ ಇಲ್ಲಿ ಸಿಗ್ತಿದೆ ಬಂಪರ್ ಆಫರ್…!

ಇಲ್ಲೇ ಸಮೀಪದಲ್ಲಿ ಕಾಲುವೆಯೊಂದರ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ಘಟನೆ ಬಳಿಕ ಕಾಲುವೆ ಕೂಡ ಭಾಗಶಃ ಕುಸಿದಿದೆ ಎನ್ನಲಾಗಿದೆ. ಆಸ್ಪತ್ರೆಯು ಕಳೆದ ಕೆಲ ದಿನಗಳ ಹಿಂದಷ್ಟೇ ಈ ಪಾರ್ಕಿಂಗ್ ಲಾಟ್​ನ್ನು ಆರಂಭಿಸಿತ್ತು.

— Yossi Eli יוסי אלי (@Yossi_eli) June 7, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...