ದುಬಾರಿ ಜೀವನದಲ್ಲಿ ಒಂದು ಮಕ್ಕಳನ್ನು ಸಂಭಾಳಿಸುವುದು ಕಷ್ಟ ಎನ್ನುವವರಿದ್ದಾರೆ. ಗರ್ಭಧರಿಸುವುದು, 9 ತಿಂಗಳು ದೇಹ, ಮನಸ್ಸಿನಲ್ಲಾಗುವ ಬದಲಾವಣೆಗೆ ಹೊಂದಿಕೊಳ್ಳುವುದು, ಹೆರಿಗೆ ನೋವು, ಹೆರಿಗೆ ನಂತ್ರ ಆಗುವ ಸಮಸ್ಯೆ, ಮಕ್ಕಳ ಪಾಲನೆ ಎಲ್ಲವೂ ದೊಡ್ಡ ಸವಾಲು. ಈ ಎಲ್ಲ ಕಾರಣಕ್ಕೆ ಅನೇಕರು ಒಂದು ಮಕ್ಕಳು ಸಾಕು ಎನ್ನುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ 8 ಮಕ್ಕಳ ತಾಯಿಯಾದ್ರೂ ಆಕೆಗೆ ಮಕ್ಕಳನ್ನು ಪಡೆಯುವ ಆಸೆ ಕಡಿಮೆಯಾಗಿಲ್ಲ. ಇನ್ನೊಂದಿಷ್ಟು ಮಕ್ಕಳು ಬೇಕು ಎನ್ನುವ ಮಹಿಳೆ ಸಿಂಗಲ್ ಮದರ್ ಎಂಬುದು ಮತ್ತೊಂದು ವಿಶೇಷ.
ಕ್ರಿಕೆಟ್ ಪ್ರಿಯರನ್ನು ಬೆರಗಾಗಿಸುತ್ತೆ ಪುಟಾಣಿ ಬಾಲಕನ ಸ್ಪಿನ್ ಕೌಶಲ್ಯ
ಈ ಮಹಾ ತಾಯಿ ಹೆಸರು ಮೇರಿ. ಯುಕೆ ಬರ್ಮಿಂಗ್ಹ್ಯಾಮ್ ನಿವಾಸಿ. ಈಕೆಗೆ ಕೆಲಸವಿಲ್ಲ. ಸರ್ಕಾರದಿಂದ ಬರುವ ಭತ್ಯೆಯಲ್ಲಿ 8 ಮಕ್ಕಳನ್ನು ಸಾಕುತ್ತಿದ್ದಾಳೆ. ಎರಡು ರೂಮಿನ ಮನೆಯಲ್ಲಿ ವಾಸಿಸುವ ಮೇರಿಗೆ ಗರ್ಭಿಣಿಯಾಗುವುದು ಒಂದು ಚಟವಂತೆ. ಯಸ್. ಗರ್ಭ ಧರಿಸುವುದು, ಹೆರಿಗೆ ನೋವು, ಮಕ್ಕಳಿಗೆ ಹಾಲುಣಿಸುವುದು ಆಕೆಗೆ ಬಲು ಇಷ್ಟವಂತೆ. ಇದೊಂದು ರೀತಿಯಲ್ಲಿ ಚಟವಾಗಿದೆ. 8 ಮಕ್ಕಳಿದ್ರೂ ನನಗೆ ಇನ್ನೂ ಮಕ್ಕಳು ಬೇಕು ಎಂದು ಮೇರಿ ಹೇಳಿದ್ದಾಳೆ.
ಜನರು ನನ್ನನ್ನು ವಿಚಿತ್ರವಾಗಿ ನೋಡ್ತಾರೆ. ಆದ್ರೆ 9 ತಿಂಗಳು ಮಗುವೊಂದು ಹೊರುವುದು, ನಂತ್ರ ಹೆರಿಗೆ, ಮಕ್ಕಳಿಗೆ ಹಾಲುಣಿಸುವುದು, ಅವರ ಡೈಪರ್ ಬದಲಿಸುವುದು ಹೀಗೆ ಎಲ್ಲ ಕೆಲಸವೂ ನನಗೆ ಇಷ್ಟವಾಗುತ್ತದೆ ಎಂದು ಮೇರಿ ಹೇಳಿದ್ದಾಳೆ. ಈಕೆ ಡಾಕ್ಯೂಮೆಂಟರಿಯೊಂದರಲ್ಲೂ ಕಾಣಿಸಿಕೊಂಡಿದ್ದಾಳೆ. ಈಕೆ ಚಟದ ಬಗ್ಗೆ ಜನರು ಬಗೆ ಬಗೆ ಕಮೆಂಟ್ ಮಾಡಿದ್ದಾರೆ.